ಬೆಂಗಳೂರು: ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಕೇಸ್ ಸಾಬೀತು ಮಾಡಲಿ ಅಂತ ಕಾಂಗ್ರೆಸ್‍ಗೆ ಸಚಿವ ಅಶ್ವಥ್ ನಾರಾಯಣ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್‍ನ ಸೇ ಸಿಎಂ (Say CM) ಅಭಿಯಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಅಧಿಕಾರಕ್ಕೆ ಬಂದ ನಂತರ ಕೋವಿಡ್ (COVID 19) ಇತ್ತು. ಈ ವೇಳೆ ರೈತರು ಸೇರಿದಂತೆ ಎಲ್ಲಾ ವರ್ಗದ ಜನರ ನೆರವಿಗೆ ಬಂದಿದ್ದೇವೆ. ಪ್ರವಾಹಕ್ಕೆ ಬೆಳೆ ಪರಿಹಾರ ನೀಡಿದ್ದೇವೆ. ಎಲ್ಲಾ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ (Congress) ಮಾಡದ ಅಭಿವೃದ್ಧಿ ನಮ್ಮ ಸರ್ಕಾರ ಮಾಡಿದೆ ಇದಕ್ಕೆ ಅವರಿಗೆ ತಡೆಯೋಕೆ ಆಗ್ತಿಲ್ಲ. ಕಾಂಗ್ರೆಸ್ ಅವರು ತಮ್ಮ ಸ್ವಂತ ಅಭಿವೃದ್ಧಿ ಬಿಟ್ಟು ಏನು ಮಾಡಿಕೊಂಡಿಲ್ಲ. ಕಾಂಗ್ರೆಸ್ ಆರೋಪಗಳು ನಿರಾಧಾರ. ನೈತಿಕತೆ ಇಲ್ಲದೆ ಆರೋಪ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.
Advertisement
ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 613 ಭರವಸೆಗಳಲ್ಲಿ 90% ನ್ನು ಪೂರೈಸಲಾಗದೆ ವಿಫವಾಗಿದೆ.
ಹುಸಿಯಾಗಿಯೇ ಉಳಿದಿರುವ ಭರವಸೆಗಳ ಬಗ್ಗೆ ಸಿಎಂ ಉತ್ತರಿಸಬೇಕು #NimHatraIdyaUttara #SayCM pic.twitter.com/K9SYY5zb7t
— Karnataka Congress (@INCKarnataka) October 19, 2022
Advertisement
ಸೇ ಸಿಎಂ ಅಂತ ನನ್ನ ಫೋಟೋ (Photo) ಹಾಕಿದ್ದಾರೆ. ಯಾವ ಆಧಾರದಲ್ಲಿ ಅವರು ಫೋಟೋ ಹಾಕಿದ್ದಾರೆ. ನನ್ನ ವಿರುದ್ಧ ಒಂದೇ ಒಂದು ಕೇಸ್ ಸಾಬೀತು ಮಾಡಲಿ ನೋಡೋಣ ಅಂತ ಸವಾಲ್ ಹಾಕಿದರು. ಅವರ ನಾಯಕರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಬೇಲ್ ಮೇಲೆ ಹೊರಗೆ ಇದ್ದಾರೆ. ಕಾಂಗ್ರೆಸ್‍ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಮ್ಮ ಬಗ್ಗೆ ಮಾಡ್ತಾರೆ.ನಮಗೆ ಮಸಿ ಬಳಿಯೋಕೆ ಇಂತಹ ಕೆಲಸ ಮಾಡ್ತಿದ್ದಾರೆ. ಇದನ್ನ ಜನರು ಒಪ್ಪೋದಿಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ RSS ನಾಯಕರ ಪಾದಪೂಜೆ ಮಾಡಲೇಬೇಕು: ಸಿದ್ದರಾಮಯ್ಯ
Advertisement
Advertisement
ಕಾಂಗ್ರೆಸ್ ಅಂದ್ರೆ ಸ್ವಾರ್ಥ, ಕುಟುಂಬ ಆಧಾರಿತ ಪಕ್ಷ. ಕಾಂಗ್ರೆಸ್ ಅವರೇ ಭ್ರಷ್ಟಾಚಾರಿಗಳು. ಕಾಂಗ್ರೆಸ್ ಹೇಳಿಕೆಗೆ, ಅಭಿಯಾನಕ್ಕೆ ಮಾನ್ಯತೆ ಇಲ್ಲ. ಕಾಂಗ್ರೆಸ್ ಅವರು ಮೋಜು-ಮಸ್ತಿ ಮಾಡಿದರು. ವೈಭವ ಜೀವನ, ದುಬಾರಿ ವಾಚ್ ಕೊಟ್ಟರು. ವ್ಯವಸಾಯ ಮಾಡಿ ಬಂಗಾರ ಬೆಳೆದವರು. ವಜ್ರದ ತೆಂಗಿನಕಾಯಿ ಬೆಳೆದವರು. ಮಾವಿನಹಣ್ಣಿನಲ್ಲಿ ಬಂಗಾರ ಬೆಳೆದವರು ಕಾಂಗ್ರೆಸ್ ಅವರು ಅಂತ ಲೇವಡಿ ಮಾಡಿದರು.