ಬೆಂಗಳೂರು: ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದು, ಇದರಲ್ಲಿ ಐವರ ರಾಜೀನಾಮೆಯಷ್ಟೇ ಕ್ರಮ ಬದ್ಧವಾಗಿದೆ. ಉಳಿದವರ ರಾಜೀನಾಮೆಗಳು ನಮ್ಮ ನಿಯಮದಂತೆ ಇಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 13 ರಾಜೀನಾಮೆಗಳಲ್ಲಿ 5 ಪತ್ರಗಳನ್ನು ಹೊರತುಪಡಿಸಿ ಅಂದ್ರೆ ಆನಂದ್ ಸಿಂಗ್, ನಾರಾಯಣ ಗೌಡ, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ ಹಾಗೂ ರಾಮಲಿಂಗಾ ರೆಡ್ಡಿ ಇವರು ನಮ್ಮ ನಿಯಮಾವಳಿಯಂತೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ಉಳಿದ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರಿಗೆ ನಮ್ಮ ಕಚೇರಿಯಿಂದ ತಿಳುವಳಿಕೆ ಕೊಟ್ಟಿದ್ದೇವೆ ಎಂದರು.
Advertisement
Advertisement
ಇಂದು ರೋಷನ್ ಬೇಗ್ ಅವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಸರಿಯಾದ ಕ್ರಮದಲ್ಲಿ ರಾಜೀನಾಮೆ ನೀಡಿರುವ 5 ಮಂದಿಗೆ ಇದೇ ತಿಂಗಳ 12 ರಂದು 3 ಗಂಟೆಗೆ ಆನಂದ್ ಸಿಂಗ್, 4 ಗಂಟೆಗೆ ನಾರಾಯಣ ಗೌಡ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರನ್ನು ವೈಯಕ್ತಿಕ ಕಾರಣ ನೀಡಲು ಕರೆದಿದ್ದೇವೆ. 15 ರಂದು ಗೋಪಾಲಯ್ಯ ಮತ್ತು ರಾಮಲಿಂಗಾ ರೆಡ್ಡಿಯನ್ನು ಪರ್ಸನಲ್ ಹೀಯರಿಂಗ್ ಗೆ ಕರೆಸಿದ್ದೇನೆ. ನಾನು ಸಮಯ ವ್ಯರ್ಥ ಮಾಡಲ್ಲ. ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
Advertisement
ಇದಾದ ಬಳಿಕ ಸಾರ್ವಜನಿಕರಿಂದ ಕೆಲವೊಂದು ದೂರುಗಳು ಕಚೇರಿಗೆ ಬಂದಿದೆ. ಅವರಿಗೆ ವಿವರಣೆ ಕೊಡಬೇಕು. ಇಂದು ಗುಂಡೂರಾವ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ನಡೆದ ಬಳಿಕ ಬಂದು ದೂರು ಕೊಟ್ಟು ಹೋಗಿದ್ದಾರೆ. ರಮೇಶ್ ಜಾರಕಿಹೊಳಿ ಇನ್ನು ಕೆಲವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಕೊಟ್ಟಿದ್ದಾರೆ. ಅವರು ಇಂದು ಅರ್ಜಿ ಕೊಟಿದ್ದರಿಂದ 11 ರಂದು ಬಂದು ನಿಮ್ಮ ವಾದ ಮಂಡಿಸಿ ಎಂದು ಹೇಳಿದ್ದೇನೆ.
Advertisement
ಎಲ್ಲ ಶಾಸಕರು ರಾಜ್ಯಪಾಲರಲ್ಲಿ ಹೋಗಿ ಅವರಿಗೆ ಅರ್ಜಿ ನೀಡಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದು, ಇದನ್ನು ಅಂಗೀಕರಿಸಬೇಕು ಎಂದು ಸ್ಪೀಕರ್ ಗೆ ಹೇಳಿ ಎಂದು ರಾಜ್ಯಪಾಲರಲ್ಲಿ ಹೇಳಿದ್ದಾರೆ. ಹೀಗಾಗಿ ರಾಜ್ಯಪಾಲರು ನನಗೆ ಪತ್ರ ಬರೆದಿದ್ದಾರೆ. ದಯಮಾಡಿ ಇದನ್ನು ನೋಡಿ ಕ್ರಮ ತೆಗೆದುಕೊಳ್ಳಲಿ ಎಂದು ಅವರು ನನಗೆ ಹೇಳಿದ್ದಾರೆ.
ನಾನು ಕೂಡ ರಾಜ್ಯಪಾರಿಗೆ ಮರು ಪತ್ರ ಬರೆದಿದ್ದು, ಇವರು ಯಾರೂ ನನ್ನ ಭೇಟಿಯಾಗಿಲ್ಲ. ನನ್ನ ಬಳಿ ಸಮಯಾವಕಾಶ ಕೇಳಿಲ್ಲ. ಆಫೀಸಿಗೆ ರಾಜೀನಾಮೆ ಪತ್ರವನ್ನು ಕೊಟ್ಟು ಹೋಗಿದ್ದಾರೆ. ನನ್ನ ಕೆಲಸ ನಾನು ಮಾಡುವುದಾಗಿ ತಿಳಿಸಿದ್ದೇನೆ ಎಂದು ಅವರು ವಿವರಿಸಿದರು.
ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
* ನಾರಾಯಣ ಗೌಡ- ಕೆ. ಆರ್ ಪೇಟೆ
ರಾಜೀನಾಮೆ ಕೊಟ್ಟ ಕೈ ಶಾಸಕರು:
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ರೋಷನ್ ಬೇಗ್- ಶಿವಾಜಿನಗರ
ಪಕ್ಷೇತರ ಶಾಸಕರು:
ಎಚ್ ನಾಗೇಶ್- ಮುಳಬಾಗಿಲು
ಆರ್ ಶಂಕರ್- ರಾಣೆಬೆನ್ನೂರು