ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಉರ್ದು (Urdu) ಬಾಣ ಬಿಟ್ಟಿದೆ. ಬಜೆಟ್‌ನಲ್ಲಿ ಭಾಷಾ ಅಭಿವೃದ್ಧಿಗೆ ಅನುದಾನದಲ್ಲಿ ತಾರತಮ್ಯ ಮಾಡಿದೆ. ಉರ್ದುಗೆ 100 ಕೋಟಿ ಅನುದಾನ ಕೊಟ್ಟಿದ್ದು, ಕನ್ನಡಕ್ಕೆ ಬರೀ 32 ಕೋಟಿ ಕೊಟ್ಟಿದೆ ಅಂತ ಬಿಜೆಪಿ ಆರೋಪ ಮಾಡಿದೆ.
ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ @BJP4Karnataka ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್ ಗಳ ರೀತಿ… pic.twitter.com/pLVPueBne7
— Siddaramaiah (@siddaramaiah) May 27, 2025
ಇದು ಭಂಡ ಹಾಗೂ ಭ್ರಷ್ಟರ ಉರ್ದು ಪ್ರೇಮ.. ನಾಡದ್ರೋಹಿ ಕಾಂಗ್ರೆಸ್.. ಸಿದ್ದರಾಮಯ್ಯಗೆ (Siddaramaiah) ಉರ್ದು ಪ್ರೇಮ ಅಂತ ಬಿಜೆಪಿ ಕಾರ್ಟೂನ್ ಸಮೇತ ಎಕ್ಸ್‌ನಲ್ಲಿ ಟೀಕಿಸಿದೆ. ಇದನ್ನೂ ಓದಿ: ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾಗಿರುವ ಘಟನೆ ತಲೆತಗ್ಗಿಸುವಂಥದ್ದು: ಪರಮೇಶ್ವರ್
ಭಂಡ ಹಾಗೂ ಭ್ರಷ್ಟರ ಉರ್ದು ಪ್ರೇಮ!!!#NaadadrohiCongress pic.twitter.com/yQGJbnXfcp
— BJP Karnataka (@BJP4Karnataka) May 27, 2025
ಸಿಟಿ ರವಿ (CT Ravi) ಕಿಡಿಕಾರಿ ಸಿದ್ದರಾಮಯ್ಯಗೆ ಏನಾದರೂ ಟಿಪ್ಪು ಭೂತ ಆವರಿಸಿಕೊಂಡಿದ್ಯಾ..? ಅಂದಿದ್ದಾರೆ. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ಕೊಟ್ಟಿದ್ದು, ಭಾಷೆಯ ಹೆಸರಿನಲ್ಲಿ ಸುಳ್ಳು ಮಾಹಿತಿ ನೀಡಿ, ಕೋಮುದ್ವೇಷ ಹಂಚಲಾಗ್ತಿದೆ. ಉರ್ದು ಶಾಲೆಗಳಲ್ಲಿ ಕನ್ನಡ ಕಲಿಸಲಾಗ್ತಿದೆ. ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ದರು, ಸಿಕ್ಕರು ಬರುತ್ತಾರೆ. ಇವರೆಲ್ಲರಿಗೂ ಸೇರಿ 4,510 ಕೋಟಿ ಅನುದಾನ ನೀಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದೆ.
ಈ ಬೆನ್ನಲ್ಲೇ ಸಿಎಂ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿಗರ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸಬೇಕು. ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ ಅಂದಿದ್ದಾರೆ. ಇದನ್ನೂ ಓದಿ: ಮಂಗಳೂರು| ತಲ್ವಾರ್‌ನಿಂದ ದಾಳಿ ನಡೆಸಿ ಯುವಕನ ಬರ್ಬರ ಹತ್ಯೆ
ಇನ್ನೂ ಸರ್ಕಾರದ 2 ವರ್ಷದ ಸಾಧನೆ ವೇಳೆ ಬಿಜೆಪಿ ಬಿಡುಗಡೆ ಮಾಡಿದ್ದ ಚಾರ್ಜ್‌ಶೀಟ್ ವಿರುದ್ಧ ಮಾನಹಾನಿ ಕೇಸ್ ಹಾಕೋ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?