– ಸ್ಪರ್ಧೆ ಅಖಾಡಕ್ಕಿಳಿದ್ದಿದ್ದು ಕೇವಲ ಮೂರೇ ಮಂದಿ
ಗಾಂಧಿನಗರ: ಗುಜರಾತ್‍ನ ಸೂರತ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ ಫ್ಲಾಪ್ ಶೋ ಆಗಿದೆ. ಈ ಸ್ಪರ್ಧೆಯಲ್ಲಿ ಕೇವಲ ಮೂರೇ ಮಂದಿ ಸ್ಪರ್ಧಿಸಿದ್ದು ಆಯೋಜಕರಿಗೆ ನಿರಾಸೆ ಉಂಟುಮಾಡಿದೆ.
ಈ ಹೂಸು ಬಿಡುವ ಸ್ಪರ್ಧೆಯ ಬಗ್ಗೆ ಘೋಷಿಸಿದ ದಿನದಿಂದಲೂ ಇದಕ್ಕೆ ಸಿಕ್ಕಪಟ್ಟೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಬರೋಬ್ಬರಿ 60 ಮಂದಿ ಈ ಸ್ಫರ್ಧೆಗೆ ತಲಾ 100 ರೂ. ಹಣವನ್ನು ಪಾವತಿಸಿ ಖಚಿತ ಪಡಿಸಿದ್ದರು. ಈ ಮಧ್ಯೆ ಇದೆಂತಾ ಸ್ಪರ್ಧೆ ನಾನ್‍ಸೆನ್ಸ್ ಎಂದ ಮಂದಿಯೂ ಇದ್ದರು. ಹೀಗಿದ್ದರೂ ಈ ವಾಟ್ ಡಿ ಫಾರ್ಟ್ ಸ್ಫರ್ಧೆ ಎಲ್ಲೆಡೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಈ ಸ್ಫರ್ಧೆ ಗೆಲ್ಲುವ ಭೂಪ ಯಾರಪ್ಪ ಎಂದು ಜನರು ಕಾದು ಕುಳಿತಿದ್ದರು.
ಆದರೆ ಸ್ಪರ್ಧೆ ದಿನ ಮಾತ್ರ ಕೇವಲ ಮೂರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ನೊಂದಣಿಯಾದ ಸ್ಪರ್ಧಿಗಳನ್ನು ನಂಬಿ ಈ ಸ್ಪರ್ಧೆ ಯಶಸ್ವಿಯಾಗುತ್ತೆ ಅಂದುಕೊಂಡಿದ್ದ ಆಯೋಜಕರಿಗೆ ಬೇಸರವಾಗಿದೆ.
ವೇಸುವಿನ ಲೇ ತೆರೆನ್ಜಾ ಬಾಟಿಕ್ ಹಾಲ್‍ನಲ್ಲಿ ಈ ಸ್ಫರ್ಧೆ ಆಯೋಜಿಸಲಾಗಿತ್ತು. ನೊಂದಣಿಯಾದ ಸ್ಪರ್ಧಿಗಳ ಆಧಾರದ ಮೇಲೆ ಆಯೋಜಕರಾದ ಗಾಯಕ ಯತೀನ್ ಸಂಗೋಯ್ ಮತ್ತು ಅವರ ಸ್ನೇಹಿತ ಮೌಲ್ ಸಾಂಘ್ವೀ ಇದಕ್ಕೆ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೂಸು ಬಿಡುವ ಸ್ಪರ್ಧೆ ‘ವಾಟ್ ದಿ ಫಾರ್ಟ್’ ಸ್ಪರ್ಧೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಕಂಡು ಆಯೋಜಕರು ಖುಷಿಪಟ್ಟಿದ್ದರು. ಆದರೆ ಸ್ಪರ್ಧೆಯ ದಿನ ನಿರಾಶೆಯಾಗಿದೆ.
ಆರ್ ಜೆ ದೇವಂಗ್ ರಾವಲ್, ಮಿಸಸ್ ಇಂಡಿಯಾ 2018ರ ಫೈನಲಿಸ್ಟ್ ಕವಿತಾ ಶರ್ಮಾ ಹಾಗೂ ಡಾ. ಪ್ರಣವ್ ಪಚ್ಚಿಗರ್ ಅವರು ಈ ಸ್ಫರ್ಧೆಗೆ ಜಡ್ಜ್‌ಗಳಾಗಿದ್ದರು. ಉದ್ಯಮಿ ಸುಶೀಲ್ ಜೈನ್, ಪಟನ್ ಅಲ್ಲಿ ಶಾಲೆ ನಡೆಸುವ ಅಲ್ಕೇಶ್ ಪಾಂಡ್ಯಾ ಮತ್ತುವಿಷ್ಣು ಹೇದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಮೂವರು ಕೂಡ ಹೂಸು ಬಿಡುವಲ್ಲಿ ವಿಫಲವಾದ ಕಾರಣಕ್ಕೆ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ.
ಈ ಬಗ್ಗೆ ಆಯೋಜಕ ಸಂಗೋಯ್ ಅವರು ಮಾತನಾಡಿ, ಈ ಬಾರಿ ಸ್ಪರ್ಧೆ ಫ್ಲಾಪ್ ಆಗಿರಬಹುದು ಆದರೆ ನಾವು ನಮ್ಮ ಪ್ರಯತ್ನ ಬಿಡಲ್ಲ. ಮತ್ತೆ ಈ ಸ್ಪರ್ಧೆಯಲ್ಲಿ ನಡೆಸುತ್ತೇವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.