ಶ್ರೀಹರಿಕೋಟಾ: ತಾಂತ್ರಿಕ ಕಾರಣದಿಂದ ಜು.15ರಂದು ರದ್ದಾಗಿದ್ದ ಭಾರತ ಮಹತ್ವಾಕಾಂಕ್ಷಿಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ಉಡಾವಣೆಯ ದಿನಾಂಕವನ್ನು ಜು.22(ಸೋಮವಾರ)ಕ್ಕೆ ನಿಗದಿಪಡಿಸಲಾಗಿದ್ದು, ಉಡಾವಣೆಯ ವೀಕ್ಷಣೆಗಾಗಿ ಆನ್‍ಲೈನ್ ಟಿಕೆಟ್ ಬುಕಿಂಗ್‍ನ್ನು ಇಸ್ರೋ ಪ್ರಾರಂಭಿಸಿದೆ.
ಈ ತಿಂಗಳ ಕೊನೆಯಲ್ಲಿ ಉಡಾವಣೆಗೆ ಚಂದ್ರಯಾನ-2ನ್ನು ನಿಗದಿ ಪಡಿಸಿದ್ದು, ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-2 ಉಡಾವಣೆಯನ್ನು ನೋಡಲು ಬರುವವರಿಗೆ ಜು.19ರಿಂದ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
Advertisement
Online registration for witnessing the launch of #GSLVMkIII-M1/#Chandrayaan2 from viewer’s gallery at Satish Dhawan Space Centre SHAR, Sriharikota will commence from 1800 hrs IST on July 19, 2019
Registration link: https://t.co/3CbfTbkaOp
— ISRO (@isro) July 18, 2019
Advertisement
ಟ್ವಿಟ್ಟರ್ ಮೂಲಕ ಈ ಮಾಹಿತಿ ಖಚಿತಪಡಿಸಿರುವ ಇಸ್ರೋ, ಸತೀಶ್ ಧವನ್ ಸ್ಪೇಸ್ ಸೆಂಟರ್‍ನಿಂದ ಉಡಾವಣೆಗೊಳ್ಳುತ್ತಿರುವ #GSLVMkIII-M1/#Chandrayaan2 ಉಡಾವಣೆಗೆ ನೀವು ಸಾಕ್ಷಿಯಾಗಬೇಕಾದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜು.19 ರಂದು ಸಂಜೆ 6ಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಈ ಹಿಂದೆ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜುಲೈ 15ರಂದು ನಸುಕಿನ ಜಾವ 2.51 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್‍ನಲ್ಲಿ ಉಡಾವಣೆಗೆ ನಿಗದಿಪಡಿಸಿದ ಕಾಲಮಾನಕ್ಕಿಂತ 1 ಗಂಟೆ ಮುನ್ನ ತಾಂತ್ರಿಕ ದೋಷ ಕಂಡು ಬಂದು ಉಡಾವಣೆ ರದ್ದುಪಡಿಸಲಾಗಿತ್ತು.