ವಿಜಯಪುರ: ಆನ್‍ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರದ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜೀರಿಯಾ ದೇಶದ ಆಪ್ರೋಚ್ಚಿ ಆಂಥೋನಿ ಬಂಧಿತ ಆರೋಪಿ. ಬಂಧಿತ ಆರೋಪಿ ಆಂಥೋನಿ ಕೋಲ್ಹಾರ ಪಟ್ಟಣದ ನಿವಾಸಿ ಕಿರಣ್ ಕಲ್ಲಪ್ಪ ದೇಸಾಯಿಗೆ ಆನ್‍ಲೈನ್ ಮುಖಾಂತರ ವಂಚಿಸಿದ್ದ. ಆರೋಪಿಯು ಕಿರಣ್‍ಗೆ ಆನ್‍ಲೈನ್ ಮೂಲಕ ಬರೋಬ್ಬರಿ 16 ಲಕ್ಷ ರೂ. ಮೋಸ ಮಾಡಿದ್ದನು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
ಈತ ನಕಲಿ ಔಷಧ ಹೆಸರಿನಲ್ಲಿ ವಂಚಿಸಿದ್ದನು. ಈ ಸಂಬಂಧ ಕಿರಣ್ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಆರೋಪಿ ಆಂಥೋನಿಯನ್ನು ವಿಜಯಪುರ ನಗರದಲ್ಲಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ