CrimeLatestMain PostNational

ಹುಟ್ಟುಹಬ್ಬದ ದಿನ 12ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಗು

Advertisements

ನವದೆಹಲಿ: 1ವರ್ಷದ ಮಗು ಹುಟ್ಟುಹಬ್ಬದ ಆಚರಣೆಯ ದಿನ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿರುವ ಕಾಸಾ ಗ್ರೀನ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

 

ರಿವಾನ್(1) ಮೃತನಾಗಿದ್ದಾನೆ. ಒಂದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ರಿವಾನ್, 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದವರೆಲ್ಲೂ ದುಃಖ ಮಡುಗಟ್ಟಿತ್ತು. ಇದನ್ನೂ ಓದಿ: ರಾಜೀನಾಮೆಯಿಂದ ಮತ್ತೆ ಹಿಂದೆ ಸರಿದ ಸಚಿವ ಆನಂದ್ ಸಿಂಗ್

ಒಂದು ವರ್ಷದ ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮನೆ ಒಂದೇ ಕ್ಷಣದಲ್ಲಿ ಸೂತಕದ ಮನೆಯಾಗಿ, ಶೋಕದ ಮನೆಯಾಗಿ ಮಾರ್ಪಾಡದ ದುರ್ಘಟನೆ ಗ್ರೇಟರ್ ನೊಯ್ಡಾದ ಬಿಸ್ರಕ್ ಪೊಲೀಸ್ ಸ್ಟೇಶನ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಮೊಮ್ಮಗಳಿಗೆ ಮೇಕೆ ಗುದ್ದಿದ್ದಕ್ಕೆ ಗಲಾಟೆ- ತಾತ ಸಾವು

ಸತ್ಯೇಂದ್ರ ಕಸನಾ ತನ್ನ ಒಂದು ವರ್ಷದ ಮಗನ ಹುಟ್ಟುಹಬ್ಬ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದರು. ಕೆಲವು ಅತಿಥಿಗಳು ಪಾಲ್ಗೊಂಡಿದ್ದರು. ಮನೆಯನ್ನೆಲ್ಲ ಶೃಂಗರಿಸಲಾಗಿತ್ತು. ಆದರೆ ಈ ಸಡಗರದ ಮಧ್ಯೆ ಮಗು ಫ್ಲ್ಯಾಟ್‍ನ ಬಾಗಿಲ ಬಳಿ ಆಡುತ್ತಿರುವುದನ್ನು ಯಾರೂ ಗಮನಿಸಲೇ ಇಲ್ಲ. ರಿವಾನ್ ಆಡುತ್ತ 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

Leave a Reply

Your email address will not be published.

Back to top button