Bengaluru CityDistrictsKarnatakaLatestLeading NewsMain Post

ಯೋಗ, ಯೋಗ್ಯತೆ ಇದ್ದವರು ಸಿಎಂ ಆಗ್ತಾರೆ: ಸಿ.ಟಿ.ರವಿ

ಬೆಂಗಳೂರು: ರಾಜಕಾರಣದಲ್ಲಿ ಅನೇಕರು ಅನಿರೀಕ್ಷಿತವಾಗಿ ಗದ್ದುಗೆ ಏರಿದ ಉದಾಹರಣೆಗಳಿವೆ. ಯೋಗ್ಯತೆ ಇರುವವರು ಅನೇಕರಿದ್ದಾರೆ, ಯೋಗ ಇದ್ದವರೂ ಸಿಎಂ ಆಗ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ ಆಗ್ತಾರೆ ಎಂಬ ಕೂಗಿನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರನೇ ತೀರ್ಪು ನೀಡೋದು. ಯಾರ‍್ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಏಕೆಂದರೆ ರಾಜಕಾರಣದಲ್ಲಿ ಅನೇಕರು ಅನಿರೀಕ್ಷಿತವಾಗಿ ಗದ್ದುಗೆ ಏರಿದ್ದಾರೆ. ಪಕ್ಷದಲ್ಲಿ ಸಿಎಂ ಆಗೋ ಯೋಗ್ಯತೆ ಇರುವವರು ಅನೇಕರು ಇದ್ದಾರೆ. ಕೆಲವರಿಗೆ ಯೋಗ್ಯತೆ ಇದ್ದು ಮೇಲೆ ಬಂದ್ರೂ ಯೋಗ ಇರಬೇಕು. ಯೋಗ ಇದ್ದವರೂ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಗಂಡಸ್ತನವಿಲ್ಲ: ಮುತಾಲಿಕ್ 

ಮೋದಿ ಕಸದಿಂದ ರಸ ತೆಗೆಯುವವರು: ಬಿಜೆಪಿ ಕಳಿಸಿದ ಚಡ್ಡಿಗಳನ್ನು ಮೋದಿಗೆ ಕಳಿಸೋದಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಮೋದಿ ಕಸದಿಂದ ರಸ ತೆಗೆಯುವವರು. ಅವರು ಯಾವುದನ್ನೂ ವೇಸ್ಟ್ ಆಗಲು ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಫೈಟ್ ವಿಚಾರದಲ್ಲಿ ಮೂಗು ತೂರಿಸಲು ನಾನು ಹೋಗುವುದಿಲ್ಲ. ಆದರೆ `Thoughts on Pakistan’, `Who Were the Shudras?‘ ಪುಸ್ತಕಗಳನ್ನು ಸಿದ್ದರಾಮಯ್ಯ ಓದಬೇಕು. ವಂಶಪಾರಂಪರ್ಯ ಆಡಳಿತಕ್ಕೆ ಜೋತು ಬಿದ್ದಿರುವ ಸಿದ್ದರಾಮಯ್ಯ ಅಂಬೇಡ್ಕರ್ ಅವರ ಯಾವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಪರ್ವತದಿಂದ ಕಮರಿಗೆ ಬಿದ್ದ ವ್ಯಾನ್‌ – 22 ಮಂದಿ ದುರ್ಮರಣ

ನಿರಾಯಾಸವಾಗಿ ಗೆಲ್ಲುತ್ತೇವೆ: ಇದೇ ವೇಳೆ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ.ರವಿ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ನಾವು ನಿರಾಯಾಸವಾಗಿ ಗೆಲ್ಲುತ್ತೇವೆ. ಕಾಂಗ್ರೆಸ್, ಜೆಡಿಎಸ್ ಬೆಳವಣಿಗೆಗಳನ್ನು ಬಿಜೆಪಿ ನೆಚ್ಚಿಕೊಂಡಿಲ್ಲ. ಏಕೆಂದರೆ ರಾಜಕಾರಣದಲ್ಲಿ ಬಹಳ ಜನ ಬಿಜೆಪಿಯನ್ನು ಬೆಂಬಲಿಸಬೇಕು ಅಂತಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published.

Back to top button