DharwadDistrictsKarnatakaLatestMain Post

ಬಿಜೆಪಿ ಸರ್ಕಾರಕ್ಕೆ ಗಂಡಸ್ತನವಿಲ್ಲ: ಮುತಾಲಿಕ್

- ಸುಪ್ರಭಾತ ಅಭಿಯಾನದ ಎರಡನೇ ಭಾಗದ ಹೋರಾಟ ಆರಂಭಿಸಿದ ಶ್ರೀರಾಮಸೇನೆ

ಹುಬ್ಬಳ್ಳಿ: ರಾಜ್ಯದ ಮಸೀದಿಗಳ ಮೇಲೆ ಇರುವ ಅನಧಿಕೃತ ಮೈಕ್‍ಗಳ ತೆರವು ಹೋರಾಟದ ಪರಿಣಾಮವಾಗಿ ಹಿಂದೂ ಸಂಘಟನೆಗಳು ಹುಟ್ಟುಹಾಕಿರುವ ಸುಪ್ರಭಾತ ಅಭಿಯಾನ ಎರಡನೇ ರೂಪ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸದ ಎದುರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತರ ಜೊತೆಗೆ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಗಂಡಸ್ತನವಿಲ್ಲ. ಇವರ ಕೈಯಲ್ಲಿ ಆಗಲಿಲ್ಲ ಅಂದರೆ ನನಗೆ ಅಧಿಕಾರ ಕೊಟ್ಟು ನೋಡಲಿ. ಯೋಗಿ ಮಾದರಿ ಕಾನೂನು ಜಾರಿಗೆ ತಂದು ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ನೀಡದವರಿಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

bjP

ಬಿಜೆಪಿ ನಾಯಕರು ಹೀಗೆ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಅವರ ಮನೆಯ ಎದರು ಮೈಕ್ ಹಾಕಿ ಭಜನೆ ಅಭಿಯಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮಸೇನೆ ಸರ್ಕಾರಕ್ಕೆ ನೀಡಿದ ಗಡುವು ಮುಗಿದಿದ್ದರೂ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತಿಲ್ಲ ಎಂದ ಅವರು, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಶಾಸಕರು ಹಾಗೂ ನಾಯಕರ ವಿರುದ್ಧ ಕಿಡಿಕಾರಿದರು. ಇನ್ನೂ ಇದೇ ವೇಳೆ ಈ ಹಿಂದೆ ನೀಡಿದ್ದ ಗುಂಡು ಹಾಕಿ ಸರಿ ಮಾಡುವ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಇಂದು ಸುಪ್ರಭಾತ ಅಭಿಯಾನದ ನಿಮಿತ್ತ ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಎದುರು ಹೋರಾಟಕ್ಕೆ ಕರೆ ನೀಡಿದ್ದರು. ಈ ಪರಿಣಾಮ ರಾಜ್ಯದ ವಿವಿಧ ಕಡೆ ಎರಡನೇ ಹಂತದ ಹೋರಾಟ ಏಕಕಾಲದಲ್ಲಿ ಆರಂಭಗೊಂಡಿದೆ. ಇದನ್ನೂ ಓದಿ: ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ

Leave a Reply

Your email address will not be published.

Back to top button