ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನಾಯಕರಿಂದ ಆಫರ್ ಬಂದಿತ್ತು ಎಂಬ ಮಾಹಿತಿ ಲಭಿಸಿದೆ.
`ನೀವು ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ.. ಬಿಜೆಪಿಗೆ ಬಂದ್ಬಿಡಿ ಬ್ರದರ್’ ಎಂದು ಬಿಜೆಪಿ ಪಕ್ಷದ ಪ್ರಭಾವಿ ಶಾಸಕರೆ ಡಿಕೆ ಶಿವಕುಮಾರ್ ಅವರಿಗೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಫರ್ ಗೆ ಡಿಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿಯೂ ಲಭಿಸಿದೆ.
ಕುಂದಗೋಳ ಉಪಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಟ ಡಿಕೆ ಶಿವಕುಮಾರ್ ಅವರಿಗೆ ಆಫರ್ ನೀಡಲಾಗಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಮಾತನಾಡಿದ್ದು, ಕುಂದಗೋಳ ಚುನಾವಣೆಯಲ್ಲಿ ಗೆಲ್ಲಲು ಏನ್ ಮಾಡ್ಬೇಕೋ ಅದನ್ನೆಲ್ಲಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮಾಡಿದ್ದಾರೆ. ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂದಿದ್ದರು. ಅಲ್ಲದೇ ನೀವು ಬಿಜೆಪಿಗೆ ಬಂದು ಬಿಡಿ ಎಂದು ಹೇಳಿದ್ದರು ಎಂದು ಹುಬ್ಬಳ್ಳಿ ಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಆಫರ್ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ನಾನು ಆ ಬಿಜೆಪಿ ಶಾಸಕರ ಹೆಸರು ಹೇಳಲ್ಲ. ಬಿಜೆಪಿಯವರು ಎಷ್ಟು ರಾಜಕೀಯ ಮಾಡುತ್ತಾರೆ ಅದಕ್ಕಿಂತ ಎರಡು ಪಟ್ಟು ರಾಜಕಾರಣವನ್ನು ನಾವು ಮಾಡುತ್ತೇವೆ ಎಂದರು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಅಲ್ಲದೇ ಉಪಚುನಾವಣೆಯಲ್ಲಿ ಕುಂದಗೋಳದ ಜನರು ಸರಿಯಾದ ಉತ್ತರ ನೀಡಿದ್ದೀರಿ. ಡಿಕೆಶಿ ಯಾರಿಗೂ ಹೆದರುವ ಮಗ ಅಲ್ಲಾ.. ಹೆದುರಿಸೋ ಮಗಾ… ಎಂದು ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟಿದ್ದೀರಿ ಎಂದು ಹೇಳಿದರು.
ಡಿಕೆಶಿ ಕಣ್ಣೀರು: ಇದೇ ವೇಳೆ ಶಿವಳ್ಳಿ ಅವರನ್ನು ನೆನೆದ ಸಚಿವರು, ನಾನು ಎಂದೂ ಕಣ್ಣೀರು ಹಾಕಿಲ್ಲ. ಆದರೆ ಅಂದು ಸ್ನೇಹಿತ, ಆಪ್ತಮಿತ್ರನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದೆ. ಈ ಬಗ್ಗೆ ಬಿಜೆಪಿ ಅವರು ಏನೆಲ್ಲಾ ಟೀಕೆ ಮಾಡಿದರು ಎಂಬುವುದರ ಬಗ್ಗೆ ಅರಿವಿದೆ ಎಂದು ಭಾವುಕರಾದರು. ಅಲ್ಲದೇ ಈ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಇಲ್ಲೇ ಪಕ್ಷದ ಕಚೇರಿಯನ್ನು ತೆರೆದು ಜನರಿಗೆ ಸ್ಪಂಧಿಸುತ್ತೇನೆ. ನಿಮ್ಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]