ಕೊಪ್ಪಳ/ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚಿಸಿರುವ ಚೈತ್ರಾ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೊಪ್ಪಳದ (Koppal) ಕನಕಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ತಿಮ್ಮಾರೆಡ್ಡಿ (Thimmareddy) ಹಣ ಕಳೆದುಕೊಂಡ ಟಿಕೆಟ್ ಆಕಾಂಕ್ಷಿ. ಅವರ ಪತ್ನಿ ಗಾಯತ್ರಿ ತಿಮ್ಮಾರೆಡ್ಡಿ ಅವರಿಗೆ ಬಿಜೆಪಿ (BJP) ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದ ಅವರು ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು ಹಾಗೂ ಗೌರವ್ ಎಂಬುವವರಿಗೆ 21 ಲಕ್ಷ ರೂ. ನೀಡಿ ಕೈ ಸುಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಚೈತ್ರಾ ಗೆಳೆಯ ಶ್ರೀಕಾಂತ್ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್ ದಾಖಲು
ಆರೋಪಿಗಳು ತಮಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೊತ್ತು, ಆರ್‍ಎಸ್‍ಎಸ್ ನಾಯಕರು ಗೊತ್ತು ಎಂದು ತಿಮ್ಮಾರೆಡ್ಡಿಯವರನ್ನು ಪರಿಚಯಿಸಿಕೊಂಡಿದ್ದರು. ಬಳಿಕ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದೇವೆ. ಅದರಲ್ಲಿ ನಿಮ್ಮ ಹೆಸರು ಮುಂಚೂಣಿಯಲ್ಲಿದೆ ಎಂದು ಅವರನ್ನು ನಂಬಿಸಿದ್ದರು. ಬಳಿಕ ಆರೋಪಿಗಳ ಮಾತು ನಂಬಿ ತಿಮ್ಮಾರೆಡ್ಡಿ ಹಣ ನೀಡಿದ್ದರು.
ಈ ಸಂಬಂಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಲವು ಷರತ್ತು ವಿಧಿಸಿ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಅನುಮತಿ
Web Stories