ಬೆಂಗಳೂರು: ಓಮಿಕ್ರೋನ್ ವೈರಸ್ ಸೋಂಕಿತ ವೈದ್ಯನ ಪತ್ನಿಗೂ ಸೋಂಕು ದೃಢಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.
Advertisement
ಬೆಂಗಳೂರಿನಲ್ಲಿ ಗುರುವಾರ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಸೊಂಕಿತ ವೈದ್ಯರೊಬ್ಬರ ಪತ್ನಿಗೂ ಇದೀಗ ಓಮಿಕ್ರೋನ್ ವೈರಸ್ ತಗುಲಿರುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಈ ಸಂಬಂಧ ಆರೋಗ್ಯ ಇಲಾಖೆ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಆಫ್ರಿಕಾದಿಂದ ಬಂದವರಲ್ಲಿ, ಬೆಂಗಳೂರಿಂದ ಎಲ್ಲೂ ಹೋಗದವರಲ್ಲಿ ಕಾಣಿಸಿತು ಒಮಿಕ್ರಾನ್!
Advertisement
Advertisement
ಓಮಿಕ್ರಾನ್ ಸೊಂಕಿತನ ಪತ್ನಿ ಕೂಡ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ವೈದ್ಯೆಯ ಸಂಪರ್ಕಕ್ಕೆ ಬಂದಿದ್ದ 30 ಜನ ಪ್ರಾಥಮಿಕ, 90 ದ್ವಿತೀಯ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯೆಗೆ 41 ವರ್ಷವಾಗಿದ್ದು, ಮೊದಲು ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ನಂತರ ಜಿನೊಮ್ ಸೀಕ್ವೆನ್ಸ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಜಿನೊಮ್ ಸೀಕ್ವೆನ್ಸ್ ವರದಿಯಲ್ಲಿ ವೈದ್ಯೆಗೆ ಓಮಿಕ್ರಾನ್ ಸೋಂಕು ಧೃಡಪಟ್ಟಿದೆ ಎನ್ನಲಾಗುತ್ತಿದೆ. ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ: ಅಶ್ವಥ್ ನಾರಾಯಣ್
Advertisement
ಸೋಂಕಿತ ವೈದ್ಯೆಯ ಟ್ರಾವೆಲ್ ಹಿಸ್ಟರಿ:
* ಖಾಸಗಿ ಹೋಟೆಲ್‍ನಲ್ಲಿ ತುಂಬಾ ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ
* ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ ಸಾಕಷ್ಟು ರೋಗಿಗಳ ಸಂಪರ್ಕಕ್ಕೆ ಬಂದಿರುವ ವೈದ್ಯೆ
* ಮಹಾದೇವಪುರ ವಲಯದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವೈದ್ಯೆ
* ಮಹಾದೇವಪುರದಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಜನರ ಸಂಪರ್ಕಕ್ಕೆ ಬಂದಿರುವ ವೈದ್ಯೆ
ಸದ್ಯ ಸೋಂಕಿತ ಪತಿ ಹಾಗೂ ಪತ್ನಿ ಇಬ್ಬರಿಗೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಓಮಿಕ್ರಾನ್ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಮುಂದೆ ಇನ್ನಷ್ಟು ಅನಾಹುತ ಸೃಷ್ಟಿಸುತ್ತದೆಯೋ ಎಂಬ ಆತಂಕ ಜನರಲ್ಲಿ ಮೂಡಿದೆ.