ನವದೆಹಲಿ: ನಂಗ್ಲೋಯ್ ಪ್ರದೇಶದ 11 ವರ್ಷದ ಬಾಲಕಿಯ ಕೊಲೆ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗಿದ್ದು ಒಂದು ಮಿಸ್ಡ್‍ಕಾಲ್ (Missed call). ಹತ್ಯೆಯಾದ ಬಾಲಕಿ ತಾಯಿಯ ಮೊಬೈಲ್‍ಗೆ (Mobile) ಅಪರಿಚಿತ ನಂಬರ್‍ನಿಂದ ಬಂದಿದ್ದ ಮಿಸ್ಡ್‌ಕಾಲ್‌ನಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
Advertisement
ಫೆ. 9ರಂದು ಮನೆಯಿಂದ ಶಾಲೆಗೆ ಹೊರಟಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಅದೇ ದಿನ ಬೆಳಗ್ಗೆ 11:50ರ ಸಮಯಕ್ಕೆ ಬಾಲಕಿಯ ತಾಯಿಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್‌ಕಾಲ್ ಬಂದಿತ್ತು. ನಂತರ ವಾಪಸ್ ಅದೇ ನಂಬರ್‍ಗೆ ಕರೆ ಮಾಡಿದಾಗ ಸ್ವಿಚ್ ಆಫ್ (switch off) ಆಗಿತ್ತು. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್ ಸರ್ಕಾರ
Advertisement
ಕೊಲೆಯಾದ ಬಾಲಕಿಯ ಪೋಷಕರು, ಆಕೆ ನಾಪತ್ತೆಯಾದ ದಿನವೇ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಮರುದಿನ ಫೆ. 10ರಂದು ಬಾಲಕಿ ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಿ ಮತ್ತೆ ದೂರು ದಾಖಲಿಸಿದ್ದರು. ಈ ಘಟನೆ ನಡೆದ 12 ದಿನಗಳ ಬಳಿಕ ಆರೋಪಿ ರೋಹಿತ್ ಅಲಿಯಾಸ್ ವಿನೋದ್‍ನನ್ನು (21) ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪೊಲೀಸರು ತನಿಖೆ ಕೈಗೊಂಡು ಮೊಬೈಲ್ ಟ್ರೇಸ್ ಮಾಡಿ ಪಂಜಾಬ್ (Punjab) ಮತ್ತು ಮಧ್ಯಪ್ರದೇಶದಲ್ಲಿ (Madhya Pradesh) ದಾಳಿ ನಡೆಸಿದ್ದರು. ಫೆ. 21 ರಂದು ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಾಲಕಿಯ ಶವವನ್ನು ಘೇವ್ರಾ ಮೋರ್ ಬಳಿ ಎಸೆದಿದ್ದಾಗಿ ತಿಳಿಸಿದ್ದಾನೆ. ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಮುಂಡ್ಕಾ ಗ್ರಾಮದ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದ್ದರೆ ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಲಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ- ಯಡಿಯೂರಪ್ಪ ಕೊಂಡಾಡಿದ ಯತ್ನಾಳ್LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k