ಹಾಸನ/ಶಿವಮೊಗ್ಗ: ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸರಣಿ ಸಾವು ಮುಂದುವರಿದಿದೆ. ಹಿರಿಯ ಜೀವಗಳು, ಎಳೆ ಹೃದಯಗಳು, ಬಾಳಿ ಬದುಕಬೇಕಾದವ್ರು ಕುಂತಲ್ಲಿ, ನಿಂತಲ್ಲಿ ಪ್ರಾಣ ಕಳೆದುಕೊಳ್ತಿದ್ದಾರೆ. ಇಂದೂ ಸಹ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬರು ರೈತರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಶಿವಮೊಗ್ಗ:
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ ಪಟ್ಟಣದ ಹಿರೇಶಕುನ ಗ್ರಾಮದಲ್ಲಿ ನಡೆದಿದೆ. ಕೃಷ್ಣಮೂರ್ತಿ ಶಿಗ್ಗಾದ್ (62) ಮೃತಪಟ್ಟ ರೈತ. ಹಿರೇಶಕುನದ ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಕುಸಿದು ಬಿದ್ದಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಾಜಿ ಲವ್ವರ್‌ಗೆ ಅಶ್ಲೀಲ ಸಂದೇಶ – ರೇಣುಕಾಸ್ವಾಮಿ ಕೊಲೆ ಕೇಸ್ ಉಲ್ಲೇಖಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್
ಹಾಸನ:
ಇನ್ನೂ ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ, ಮೆಣಸಮಕ್ಕಿ ಗ್ರಾಮದಲ್ಲಿ ರೈತರೊಬ್ಬರು (Farmers) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಲಕ್ಷ್ಮಣ (52) ಹೃದಯಾಘಾತಕ್ಕೆ ಬಲಿಯಾದ ರೈತ. ನಿನ್ನೆ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗಿದ್ದ ಲಕ್ಷ್ಮಣ ಮನೆಗೆ ಬಂದಾಗ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ತುರ್ತು ಚಿಕಿತ್ಸಾ ವಾಹನ ಮನೆಯ ಬಳಿ ಬರುವಷ್ಟರಲ್ಲಿ ಮೃತಪಟ್ಟ ಲಕ್ಷ್ಮಣ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?
ಭಾನುವಾರ (ಜು.6) ಸಹ ಕೂಡ ಹಾಸನದಲ್ಲಿ (Hassan) ಇಬ್ಬರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು, ಯಾದಗಿರಿಯಲ್ಲಿ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದರೊಂದಿಗೆ ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.