– 80 ಜನರಿಗೆ ಗಾಯ, 8 ಜನರ ಸ್ಥಿತಿ ಗಂಭೀರ
ಬಳ್ಳಾರಿ: ಆಂಧ್ರದ (Andhra Pradesah) ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ನಡೆಯುವ ಬಡಿಗೆ ಕಾಳಗದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಲೂರಿನ ಪೋತರಾಜು (30) ಸಾವನ್ನಪ್ಪಿದ ಭಕ್ತ. ಇನ್ನೂ 80 ಜನರು ಗಾಯಗೊಂಡಿದ್ದು, ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಬೀದರ್ | ಜನವಸತಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಬೃಹತ್ ಮೊಸಳೆ – ಗ್ರಾಮಸ್ಥರಲ್ಲಿ ಆತಂಕ
ಪ್ರತಿ ವರ್ಷ ವಿಜಯ ದಶಮಿಯಂದು ರಾತ್ರಿ ಉತ್ಸವ ಮೂರ್ತಿಯನ್ನ ತಮ್ಮ ಊರಿಗೆ ಕೊಂಡೊಯ್ಯಲು ಬಡಿಗೆ ಕಾಳಗ ನಡೆಯುತ್ತದೆ. ಅದರಂತೆ ನಿನ್ನೆ (ಅ.21) ರಾತ್ರಿ ಗುಡ್ಡದ ಮಲ್ಲಯನ ಜಾತ್ರೆಯಲ್ಲಿ ದಂಡ ಕಾಳಗ ನಡೆಯುವಾಗ ರಕ್ತದೋಕುಳಿ ಹರಿದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೂ ಹಲವರು ಗಾಯಗೊಂಡಿದ್ದು, ಆಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಡಿಗೆ ಬಡಿದಾಟ ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದು, ಕೆಲ ಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ರಕ್ತ ಚಿಮ್ಮಿದ ಬಳಿಕ ಕಾಳಗ ಸಂಪನ್ನ
ಆಂಧ್ರದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಕಾರ್ಣಿಕದಲ್ಲಿ ಆಂಧ್ರ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಈ ಬಾರಿ ಮಲ್ಲಿಗೆ ಹೂವಿನಿಂದ ಗಂಗೆ ನಿಂತ್ತಾಳ. 7,900 ನಗಳ್ಳಿ, 3,400 ಒಕ್ಕಲು ಜೋಳ, ಮೂರು, ಆರು, ಆರು ವರುಣಾದಿತು ಎಂದು ಕಾರ್ಣಿಕದಲ್ಲಿ ಗುಡ್ಡದ ಮಲ್ಲಯ್ಯ ಎಚ್ಚರಕೆ ಕೊಟ್ಟಿದ್ದ. ಪ್ರತಿ ವರ್ಷವೂ ಪ್ರಕೃತಿ ಹಾಗೂ ರೈತರ ಬಗ್ಗೆ ಗುಡ್ಡದ ಮಲ್ಲಯ್ಯ ಕಾರ್ಣಿಕ ನುಡಿಯುತ್ತಾನೆ.
ಅದಾದ ಬಳಿಕ ಗುಡ್ಡದ ಮಲ್ಲಯ್ಯನ ಉತ್ಸವ ಮೂರ್ತಿಯನ್ನ ತಮ್ಮ ಊರಿಗೆ ಕೊಂಡೊಯ್ಯಲು ಭಕ್ತರು ಬಡಿದಾಡುತ್ತಾರೆ. ಈ ಹೊಡೆದಾಟದ ವೇಳೆ ರಕ್ತ ಚಿಮ್ಮಿದ ಬಳಿಕ ಕಾಳಗ ಸಂಪನ್ನ ಎನ್ನುವ ಪ್ರತೀತಿಯಿದೆ. ಅದರಂತೆ ಪ್ರತಿ ವರ್ಷವೂ ಬಡಿಗೆ ಕಾಳಗ ನಡೆದು ಕೆಲವರಿಗೆ ಗಾಯಗಳಾಗುತ್ತವೆ.ಇದನ್ನೂ ಓದಿ: ಹಬ್ಬದ ಹೆಸರಲ್ಲಿ ಮಧ್ಯರಾತ್ರಿ ವರೆಗೂ ಪಟಾಕಿ ಸಿಡಿಸೋದಕ್ಕೆ ನಟಿ ರಮ್ಯಾ ಕಿಡಿ
