ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ನಾಟಿ ಮಾಡಿದ್ದಾರೆ.
Advertisement
ಬಿ.ಸಿ ಪಾಟೀಲ್ ಅವರನ್ನು ಕುಂಭಮೇಳ ಮತ್ತು ವಿವಿಧ ಜಾನಪದ ಕಲಾತಂಡಗಳಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಭೀವಶಿ ಗ್ರಾಮದ ಕಳೋಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಬಳಿಕ ಎತ್ತಿನ ಬಂಡಿಯ ಮೇಲೆ ನಿಂತು ದೇವಸ್ಥಾನ ಆವರಣದಿಂದ ಗ್ರಾಮದ ಹೊರವಲಯದಲ್ಲಿರುವ ನರಸಿಂಹ ಚೌಗುಲೆ ಅವರ ಕೃಷಿಭೂಮಿಗೆ ಹೋಗಿ ಸಚಿವರು ಕಬ್ಬಿನ ನಾಟಿ ಮಾಡಿದರು. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು
Advertisement
Advertisement
ಎತ್ತಿನಬಂಡಿಯಲ್ಲಿ ಜಮೀನಿನವರೆಗೆ ಮೆರವಣಿಗೆ ಮೂಲಕ ಕೌರವ ಕಬ್ಬಿನ ಗದ್ದೆಗೆ ಬಂದು ನಾಟಿ ಮಾಡಿದರು. ಬಳಿಕ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು, ಮುತ್ತೈದೆಯರ ಕುಂಭಮೇಳ ಮೆರವಣಿಗೆ ಕಳೆ ಹೆಚ್ಚಿಸಿದವು.
Advertisement
ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇತರರು ಸಚಿವರಿಗೆ ಸಾಥ್ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತಾನಡಿದ ಅವರು, ರೈತರು ಸಮಸ್ಯೆಗಳನ್ನು ಹೊತ್ತು ಸರ್ಕಾರದ ಮುಂದೆ ಹೋಗಬಾರದು. ಸರ್ಕಾರವೇ ರೈತರ ಬಳಿಗೆ ಹೋಗಬೇಕು ಎಂಬ ನಿಟ್ಟಿನಲ್ಲಿ ರೈತರಿಗೊಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ
ಇಡೀ ದಿನ ರೈತರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಕೂಡ ಕಾರ್ಯಕ್ರಮದ್ದಾಗಿದ್ದು, ರೈತರು, ರೈತ ಮಕ್ಕಳೊಂದಿಗೆ ಸಂವಾದ ನಡೆಸಲಾಗುತ್ತಿದೆ. ನೆರೆ ಸಂತ್ರಸ್ತರ ಬಗ್ಗೆ ಈಗಾಗಲೇ ಸರ್ವೇ ಮಾಡಲಾಗಿದೆ. ಸರ್ವೇ ಕಾರ್ಯ ಮುಗಿದ ಮೇಲೆ ಪರಿಹಾರ ವಿತರಣೆ ಮಾಡಲಾಗುತ್ತೆ ಎಂದರು.