ಚಿಕ್ಕಮಗಳೂರು: ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಆಗುತ್ತದೆ ಅಂತಾ ಮುಸ್ಲಿಮರಿಗೂ ಒಂದು ದಿನ ಎನಿಸಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹೇಳಿಕೆ ನೀಡಿದರು.
ಚಿಕ್ಕಮಗಳೂರು (Chikkamagaluru) ನಗರದ ಕೋದಂಡರಾಮಸ್ವಾಮಿ ದೇವಾಲಯವನ್ನ ಶುಚಿ ಮಾಡಿದ ಬಳಿಕ ಮಾತನಾಡಿದ ಅವರು, ಘಜ್ನಿ, ಕಿಲ್ಜಿ, ಘೋರಿ, ಔರಂಗಜೇಬ್, ಮೊಘಲರು ಹಾಗೂ ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಿದ್ದಾರೆ. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನ ಗುರುತಿಸಿಕೊಳ್ಳುವುದಿಲ್ಲ. ಮುಸ್ಲಿಮರು ಭಾರತೀಯ ಸನಾತನ ಪರಂಪರೆಯಲ್ಲಿ ವಿಶ್ವಾಸವಿಟ್ಟು ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೂ ಒಂದು ದಿನ ಮನ ಪರಿವರ್ತನೆಯ ದಿನ ಬರಬಹುದು ಎಂದರು. ಇದನ್ನೂ ಓದಿ: ಅನಂತ್‌ಕುಮಾರ್ ಹೆಗಡೆ ಬಂಧನ ಮಾಡೋದು ಪೊಲೀಸರು ತೀರ್ಮಾನ ಮಾಡ್ತಾರೆ: ಪರಮೇಶ್ವರ್
Advertisement
Advertisement
ಮುಸ್ಲಿಮರಿಗೂ ಒಂದು ದಿನ ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ, ಅದು ಹರಾಮ್ ಆಗುತ್ತೆ ಎನಿಸಬಹುದು. ಹರಾಮ್ ಆಗುತ್ತೆ ಎನಿಸಿದ ದಿನ ಅವರು ಉದಾರತೆಯನ್ನ ಪ್ರದರ್ಶನ ಮಾಡಬಹುದು ಎಂದು ಸಿ.ಟಿ.ರವಿ ಹೇಳಿದರು.
Advertisement
ಘಜ್ನಿ, ಘೋರಿ, ಮೊಘಲರ ಜೊತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ. ಹಾಗಂತ ನಾವು ಎಲ್ಲಾ ಮುಸ್ಲಿಮರನ್ನ ಒಂದೇ ತಕ್ಕಡಿಯಲ್ಲಿಟ್ಟು ತೂಕ ಮಾಡೋದಿಲ್ಲ. ಇಲ್ಲಿನ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಬರಬೇಕು. ಅವರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರು ಆದರ್ಶವಾಗಬೇಕು. ಆಗ ಮಾತ್ರ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ
Advertisement
ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಿವಾದಾತ್ಮಕ ಹೇಳಿಕ ನೀಡಿದ ಸಂಸದ ಅನಂತ್‌ಕುಮಾರ್ ಹೆಗ್ಡೆ ಹೇಳಿಕೆ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ. ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಹಿರಿಯರು ಮತ್ತು ಅವರ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನ ಯಾರೇ ಆದರು ಕೊಡಬೇಕು. ಅನಂತ್‌ಕುಮಾರ್ ಹೆಗ್ಡೆಯವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ, ಮತ್ತೊಬ್ಬರನ್ನ ಹರ್ಟ್ ಮಾಡಬಾರದು ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದ ಹಾಗೆ ಕೇಳಿದ್ರೆ ನಾವು ಆಡಳಿತ ಮಾಡೋಕಾಗಲ್ಲ: ಪರಮೇಶ್ವರ್
ಯಾರೇ ಆದರೂ ಏಕವಚನದಲ್ಲಿ ಮಾತನಾಡೋದು, ಅಗೌರವ ತೋರುವುದನ್ನ ನಾವು ಒಪ್ಪುವುದಿಲ್ಲ. ಮಾತನಾಡುವ ಭರದಲ್ಲಿ ಶಿವರಾಜ್ ತಂಗಡಗಿಯವರು ನಾಯಿಗೆ ಹೋಲಿಸಿರುವುದು ತಪ್ಪೇ. ಪ್ರಧಾನಿಯನ್ನ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡೋದು, ಅವನು ಹೋಗಿದ್ದನಾ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಅಂತಾ ಪ್ರಧಾನಿಯನ್ನ ಕೇಳಿದ್ದಾರೆ. ಹಿರಿಯರಾಗಿ, ಹೇಳುವಂತವರಾಗಿ ಪ್ರಧಾನಿಗೆ ಏಕವಚನದಲ್ಲಿ ಮಾತನಾಡೋದು ನೀವೆಷ್ಟು ಸರಿ ಎಂದು ಸಿದ್ದು ವಿರುದ್ಧವೂ ಕಿಡಿಕಾರಿದ್ದಾರೆ.
ಹಿರಿಯರು ದೊಡ್ಡತನದಲ್ಲಿ ನಡೆದುಕೊಳ್ಳಬೇಕು. ಆಗ ಉಳಿದವರಿಗೂ ಮಾದರಿಯಾಗುತ್ತೆ ಎಂದಿದ್ದಾರೆ. ರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವನು. ಅವರು ಏಕವಚನದಲ್ಲಿ ಮಾತನಾಡಿರುವುದನ್ನ ನಾವು ಒಪ್ಪುವುದಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.