ತುಮಕೂರು: ಇನ್ನೋವಾ ಕಾರು (Innova Car) ಹಾಗೂ ಆಟೋ (Auto Rikshaw) ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಬಾಲಕ ಸಾವನ್ನಪ್ಪಿ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತುಮಕೂರಿನಲ್ಲಿ ನಡೆದಿದೆ.
Advertisement
ಮೃತ ದುರ್ದೈವಿ ಬಾಲಕನನ್ನು ವರ್ಷಿತ್ ರೆಡ್ಡಿ(14) ಎಂದು ಗುರುತಿಸಲಾಗಿದೆ. ಪಾವಗಡ ತಾಲೂಕಿನ ಟಿ.ಎನ್.ಪೇಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪೆನಗೊಂಡದಿಂದ ಚಿತ್ರದುರ್ಗ ಕಡಗೆ ಹೋಗುತ್ತಿದ್ದ ಕಾರು, ರೊದ್ದಂ ಗ್ರಾಮದಿಂದ ಪಾವಗಡ ಕಡೆಗೆ ಬರುತ್ತಿದ್ದ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
Advertisement
Advertisement
ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಆಟೋಗೆ ಕಾರು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಬಾಲಕ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಲೇಡಿ ಡಾಕ್ಟರ್ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ರೋಗಿಗಳ ಚಿನ್ನಾಭರಣ ಕಳವು
Advertisement
ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k