ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಫ್ರಾನ್ಸ್ (France) ಪ್ರವಾಸದ ನಡುವೆ ಅಬುಧಾಬಿಗೆ ತೆರಳಲಿದ್ದಾರೆ. ಈ ವೇಳೆ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಉನ್ನತ ನಾಯಕರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.
ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಸ್ಥಿರವಾಗಿ ಬಲಗೊಳ್ಳುತ್ತಿದೆ. ಪ್ರಧಾನಿಯವರ ಭೇಟಿಯು ಉಭಯ ದೇಶಗಳ ಸಂಬಂಧ ಬಲಗೊಳ್ಳಲು ಸಹಕಾರಿಯಾಗಿದೆ. ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ರಕ್ಷಣೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಗೆ ಇದು ನೆರವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ತಿಳಿಸಿದೆ. ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್!
Advertisement
Advertisement
2022ರಲ್ಲಿ ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಿಂದ ಹಿಂದಿರುಗುವಾಗ ಪ್ರಧಾನಿ ಅಧ್ಯಕ್ಷ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿದ್ದರು. ಇದು ಇತ್ತೀಚಿನ ಎರಡನೇ ಭೇಟಿ ಆಗಿದೆ. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿ ಮೋದಿಯವರ ಗಲ್ಫ್ ರಾಷ್ಟ್ರಕ್ಕೆ ಐದನೇ ಭೇಟಿಯಾಗಿದೆ. ಅಲ್ಲದೇ ಪ್ರಧಾನಿ ಈ ವಾರ ಫ್ರಾನ್ಸ್‍ಗೆ ಭೇಟಿ ನೀಡಲಿದ್ದಾರೆ. 1789 ರಲ್ಲಿ ಫ್ರೆಂಚ್ ಕ್ರಾಂತಿಯ ನೆನಪಿಗಾಗಿ ಆಚರಿಸಲಾಗುವ ಬಾಸ್ಟಿಲ್ ಡೇ ಆಚರಣೆಯಲ್ಲಿ ಅವರು ಗೌರವಾನ್ವಿತ ಅತಿಥಿಯಾಗಿರಲಿದ್ದಾರೆ.
Advertisement
Advertisement
ಪ್ರಮುಖ ರಕ್ಷಣಾ ಒಪ್ಪಂದ ಮತ್ತು ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳು ಪ್ರವಾಸದ ವೇಳೆ ನಡೆಯಲಿದೆ. ನರೇಂದ್ರ ಮೋದಿ ಫ್ರಾನ್ಸ್ ಭೇಟಿ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏಳು ಜನ ಸ್ಟಾರ್ ಗಳ ಕಾಂಬಿನೇಷನ್ ನಲ್ಲಿ ಶಿವಣ್ಣ ಸಿನಿಮಾ: ಯಾರೆಲ್ಲ ಸ್ಟಾರ್?
Web Stories