– ಒಬ್ಬರಾದ್ರೂ ವಿಕೆಟ್ ತೆಗೆಯೋರಿಲ್ಲ – ಆರ್‌ಸಿಬಿ ಹೇಗೆ ತಾನೆ ಗೆಲ್ಲುತ್ತೆ? – ಇರ್ಫಾನ್ ಪಠಾಣ್ ಗರಂ
ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡದ ಸೋಲು ಕ್ರಿಕೆಟ್ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಂಡದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ (Virat Kohli), ಪ್ರಮುಖ ವಿಕೆಟ್ ಕೀಳುವಲ್ಲಿ ವಿಫಲರಾದ ಬೌಲರ್‌ಗಳು ಹಾಗೂ ಕೈಗೊಟ್ಟ ಗ್ಲೆನ್ ಮಾಕ್ಸ್‌ವೆಲ್ ವಿರುದ್ಧ ಹಿರಿಯ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.
There are two guys playing with the strike rate of 170+ and on the other end there is not a single wicket taker. Not a single go to bowler for RCB. How will you win? #RRvRCB
— Irfan Pathan (@IrfanPathan) April 6, 2024
Advertisement
ಆರ್‌ಸಿಬಿ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಇನ್ನೂ 20 ರನ್ ಹೆಚ್ಚುವರಿ ಗಳಿಸಬೇಕಿತ್ತು. ವಿರಾಟ್ ಕೊಹ್ಲಿ ಇನ್ನಿಂಗ್ಸ್ ಚೆನ್ನಾಗಿತ್ತು. ಆದ್ರೆ ಅವರೊಂದಿಗೆ ಸಾಥ್ ನೀಡಬೇಕಿದ್ದ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ಸರಿಯಾಗಿ ಬ್ಯಾಟಿಂಗ್ ಮಾಡಲಿಲ್ಲ. ಮಹಿಪಾಲ್ ಲೊಮ್ರೋರ್ ಸಹ ತಂಡದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ನಷ್ಟವಾಯಿತು. ವಿರಾಟ್ ಕೊಹ್ಲಿ 39 ಬಾಲ್‌ಗೆ 50 ರನ್ ಗಳಿಸಿದಾಗ, ಅವರ ಸ್ಟ್ರೈಕ್ ರೇಟ್ 200ರ ಗಡಿ ದಾಟಬೇಕಿತ್ತು. ಆದ್ರೆ ಇತರ ಬ್ಯಾಟರ್‌ಗಳು ಸಾಥ್ ನೀಡದ ಪರಿಣಾಮ ಸಂಪೂರ್ಣ ಒತ್ತಡ ಕೊಹ್ಲಿ ಮೇಲೆ ಇತ್ತು ಎಂದು ಹೇಳಿದ್ದಾರೆ.
Advertisement
Advertisement
ಕೊಹ್ಲಿ ಒಳ್ಳೆ ಫಾರ್ಮ್‌ನಲ್ಲಿದ್ದಾರೆ, ಕೊನೇವರೆಗೂ ಕ್ರೀಸ್‌ನಲ್ಲಿ ಉಳಿಯೋದು ಅವರ ಪಾತ್ರ. ಆದ್ರೆ ಅಷ್ಟೊಂದು ಹಣಕ್ಕೆ ಆಯ್ಕೆಯಾದ ಇತರ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಮ್ಯಾಕ್ಸ್‌ವೆಲ್ (Glenn maxwell) ತರ ಆದ್ರೆ ಯಾರು ಏನ್ ಮಾಡೋದಕ್ಕೆ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ; ಆರ್‌ಸಿಬಿಗೆ ಹೀನಾಯ ಸೋಲು!
Advertisement
ಆರ್‌ಸಿಬಿ ವಿರುದ್ಧ ಪಠಾಣ್ ಗರಂ:
ಇಬ್ಬರು ಬ್ಯಾಟರ್‌ಗಳು (ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್) 170+ ಸ್ಟ್ರೈಕ್ ರೇಟ್‌ನೊಂದಿಗೆ ಆಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್ ಇಲ್ಲ. ಆರ್‌ಸಿಬಿ ಬೌಲರ್‌ಗಳ ಮೊರೆ ಹೋಗಲಿಲ್ಲ. ಹೀಗಿರುವಾಗ ನೀವು ಹೇಗೆ ಗೆಲ್ಲುತ್ತೀರಿ? ಎಂದು ತಿವಿದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!
ಮಹಿಪಾಲ್ ಲೋಮ್ರೋರ್ ದೇಶೀಯ ಕ್ರಿಕೆಟ್‌ನಲ್ಲಿ ಈ ಪಿಚ್‌ನಲ್ಲಿ ಆಡುತ್ತಾರೆ. ಆರ್‌ಸಿಬಿ ತಂಡದಲ್ಲಿ ತಮ್ಮ ಫಾರ್ಮ್ ಸಾಬೀತು ಮಾಡಿದ್ದಾರೆ. ಆದ್ರೆ ಅವರು ಪ್ಲೇಯಿಂಗ್-11 ಭಾಗವಾಗಿರಲಿಲ್ಲ. ಆದ್ದರಿಂದ ಫ್ರಾಂಚೈಸಿಯಲ್ಲಿ ಭಾರತೀಯ ಕೋಚ್‌ಗಳು ಇದ್ದರೆ, ಇಂತಹ ಮೂಲಭೂತ ತಪ್ಪುಗಳು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಜೋಸ್ ಬಟ್ಲರ್ ಅವರ ಶತಕವನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್ ತಾಯಿ ಹೇಳಿದ್ದೇನು?
ಶನಿವಾರ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 10 ಓವರ್‌ಗಳಲ್ಲಿ 183 ರನ್ ಗಳಿಸಿತ್ತು. ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲೇ 189 ರನ್ ಗಳಿಸಿ ಗೆಲುವು ಸಾಧಿಸಿತ್ತು. ಹೌದು. ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು.
ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್:
* ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
* ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
* ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
* ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್, 2010
* ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್, 2022
* ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012