ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು(ಆಗಸ್ಟ್, 14) ಅಪರೂಪದಲ್ಲಿ ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ. ಈ ದಿನ ಕೇವಲ 4 ರನ್ ಗಳಿಸಿದ್ದರೆ ಡಾನ್ ಬ್ರಾಡ್ಮನ್ ವಿಶಿಷ್ಟವಾದ ದಾಖಲೆ ಬರೆಯುತ್ತಿದ್ದರು.
69 ವರ್ಷದ ಹಿಂದೆ ಈ ದಿನ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 4 ರನ್ ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿಶೇಷ ದಾಖಲೆಯಿಂದ ಬ್ರಾಡ್ಮನ್ ವಂಚಿತರಾದರು.
Advertisement
1948 ಆಗಸ್ಟ್ 14, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವದು. ಕ್ರಿಕೆಟ್ ಲೋಕದ ಏಕೈಕ ಡಾನ್, ಸರ್ ಬ್ರಾಡ್ಮನ್ ಕ್ರೀಸ್‍ಗಿಳಿದಿದ್ದರು. ಸರ್ವಶ್ರೇಷ್ಠ ಜೀವಮಾನ ಸಾಧನೆಗೆ ಬ್ರಾಡ್ಮನ್‍ಗೆ ಬೇಕಾಗಿದ್ದಿದ್ದು ಕೇವಲ 4 ರನ್. 4 ರನ್‍ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ ಆಟಗಾರ ಎಂಬ ಕೀರ್ತಿಗೆ ಬ್ರಾಡ್ಮನ್ ದೊರೆಯಾಗುತ್ತಿದ್ದರು.
Advertisement
ಈ ಪಂದ್ಯದಲ್ಲಿ ತಾನು ಎದುರಿಸಿದ ಹೋಲಿ ಬೌಲಿಂಗ್‍ನ ಎರಡನೇ ಎಸೆತದಲ್ಲಿ ಬ್ರಾಡ್ಮನ್ ಕ್ಲೀನ್ ಬೌಲ್ಡ್ ಆದರು. ಅದು ಬ್ರಾಡ್ಮನ್ ಕ್ರಿಕೆಟ್ ಇತಿಹಾಸದ ಕೊನೆಯ ಇನ್ನಿಂಗ್ಸ್ ಆಗಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ ಒಂದು ಇನ್ನಿಂಗ್ಸ್ ಮತ್ತು 149 ರನ್‍ಗಳಿಂದ ಗೆದ್ದುಕೊಂಡಿತ್ತು.
Advertisement
52 ಟೆಸ್ಟ್ ಪಂದ್ಯಗಳ 80 ಇನ್ನಿಂಗ್ಸ್ ಮೂಲಕ ಡಾನ್ ಬ್ರಾಡ್ಮನ್ 99.94 ಸರಾಸರಿಯೊಂದಿಗೆ 6996 ರನ್ ಗಳಿಸಿದ್ದರು. 10 ಬಾರಿ ನಟೌಟ್ ಆಗಿದ್ದ ಇವರು ಗರಿಷ್ಠ 334 ರನ್ ಹೊಡೆದಿದ್ದರು. 29 ಶತಕ, 13 ಅರ್ಧಶತಕ ಹೊಡೆದಿದ್ದ ಇವರು 32 ಕ್ಯಾಚ್ ಹಿಡಿದಿದ್ದರು.
Advertisement
ಇದನ್ನೂ ಓದಿ: ಕ್ಲೀನ್ ಸ್ವೀಪ್‍ನೊಂದಿಗೆ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕೊಹ್ಲಿ ಪಡೆ
https://youtu.be/hvrOHYp8nRY