ಬೆಂಗಳೂರು: ಗಣೇಶ ಚತುರ್ಥಿ (Ganesh Chaturthi) ಹಬ್ಬದ ಪ್ರಯುಕ್ತ ಪ್ರಾಣಿವಧೆ (Animal Slaughter) ಹಾಗೂ ಮಾಂಸ ಮಾರಾಟ (Meat Sale) ನಿಷೇಧಿಸಿದೆ ಎಂದು ಬಿಬಿಎಂಪಿ (BBMP) ಆದೇಶ ಹೊರಡಿಸಿದೆ. ಅಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಸೆ.7ರಂದು ಗಣೇಶ ಚತುರ್ಥಿ ಹಬ್ಬದ ದಿನವಾಗಿದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ, ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರುವಂತಿಲ್ಲ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು (ಪಶುಪಾಲನೆ) ಸುತ್ತೋಲೆ ಹೊರಡಿಸಿದ್ದಾರೆ. ನಿಯಮ ಮೀರಿದಲ್ಲಿ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ. ಇದನ್ನೂ ಓದಿ: Punjab Economic Crisis | ವಿದ್ಯುತ್ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್, ಡೀಸೆಲ್ ಜೊತೆ ಬಸ್ ಟಿಕೆಟ್ ದರ ಏರಿಸಿದ ಪಂಜಾಬ್
ಇನ್ನು ನಗರದಾದ್ಯಂತ ಗಣೇಶ ಉತ್ಸವವನ್ನು ಆಯೋಜಿಸುವವರಿಗೆ ಈಗಾಗಲೇ ಬಿಬಿಎಂಪಿ ಕಡ್ಡಾಯವಾಗಿ ಪಾಲಿಸುವಂತೆ ಕೆಲ ನಿಯಮಗಳ ಪಟ್ಟಿ ಪ್ರಕಟಿಸಿತ್ತು. ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ರಸ್ತೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ಗಣೇಶ ಉತ್ಸವದ ಆಯೋಜಕರನ್ನೇ ಹೊಣೆ ಮಾಡುವ ಬಗ್ಗೆ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್