ನವದೆಹಲಿ: ಪಾಕ್ ವಶದಿಂದ ಮಾತೃ ಭೂಮಿಗೆ ಮರಳುತ್ತಿರುವ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ವಾಘಾ ಗಡಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಟ್ವೀಟ್ ಮೂಲಕ ಮನವಿ ಸಲ್ಲಿಸಿದ ಅಮರೀಂದರ್ ಸಿಂಗ್ ಅವರು, ಸದ್ಯ ನಾನು ಅಮೃತ್‍ಸರದಲ್ಲಿದ್ದೇನೆ. ಈಗ ಪಂಜಾಬಿನ ಗಡಿ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿರುವೆ. ಪೈಲಟ್ ಅಭಿನಂದನ್ ಅವರನ್ನು ವಾಘಾ ಗಡಿಯಿಂದ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ನಮ್ಮ ರಾಜ್ಯದ ಗಡಿ ಪ್ರದೇಶದಿಂದ ವೀರ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾನು ಹಾಗೂ ಅಭಿನಂದನ್ ತಂದೆ ಇಬ್ಬರೂ ರಾಷ್ಟ್ರೀಯ ಭದ್ರತಾ ಅಕಾಡೆಮಿಯ (ಎನ್‍ಡಿಎ) ನಿವೃತ್ತ ಉದ್ಯೋಗಿಗಳು ಎಂದು ತಿಳಿಸಿದ್ದಾರೆ.
Advertisement
Dear @narendramodi ji , I’m touring the border areas of Punjab & I’m presently in Amritsar. Came to know that @pid_gov has decided to release #AbhinandanVartaman from Wagha. It will be a honour for me to go and receive him, as he and his father are alumnus of the NDA as I am.
— Capt.Amarinder Singh (@capt_amarinder) February 28, 2019
Advertisement
ಪೈಲಟ್ ಅಭಿನಂದನ್ ಅವರು ಫೆಬ್ರವರಿ 27ರಂದು ಪಾಕಿಸ್ತಾನ ಸೇನೆಯ ಬಂಧನಕ್ಕೆ ಒಳಗಾಗಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಮಾತೃ ಭೂಮಿಗೆ ಮರಳುತ್ತಿರುವ ಅಭಿನಂದನ್ ಅವರನ್ನು ಸ್ವಾಗತಿಸಲು ಪಂಚಾಬ್‍ನ ವಾಘಾ ಗಡಿಯಲ್ಲಿ ಸಾವಿರಾರು ಜನರು ಸೇರಿದ್ದಾರೆ. ವೀರ ಯೋಧನ ಸ್ವಾಗತಕ್ಕೆ ದೇಶದ ಜನತೆ ಕಾತರದಲ್ಲಿದ್ದಾರೆ.
Advertisement
ನಮ್ಮ ಬಂಧನದಲ್ಲಿ ಭಾರತೀಯ ಪೈಲಟ್ ಇದ್ದಾರೆ. ಉಭಯ ದೇಶಗಳ ಮಧ್ಯೆ ಶಾಂತಿ ಕಾಪಾಡುವ ಉದ್ದೇಶದಿಂದ ಶುಕ್ರವಾರ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದ ಪಾಕ್ ಸರ್ಕಾರ ಗುರುವಾರ ಸಂಜೆ ಅಧಿಕೃತವಾಗಿ ಮಾಹಿತಿ ನೀಡಿತ್ತು.
Advertisement
ಪೈಲಟ್ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ದಮಾನ್ ಸೇರಿದಂತೆ ಸಂಬಂಧಿಕರು ವಾಘಾ ಗಡಿಯಲ್ಲಿ ಅಭಿನಂದನ್ ಅವರ ಆಗಮನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅಭಿನಂದನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಾಘಾ ಗಡಿ ಪ್ರದೇಶಕ್ಕೆ ಬರಬೇಕು ಎಂದು ಪಂಚಾಬ್ ಸಿಎಂ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
https://www.youtube.com/watch?v=V3v7nPlplzo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv