ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.
Advertisement
ಇದು ಕೇವಲ ಭಾವನೆಗಳ ಗುಚ್ಛವಲ್ಲವಂತೆ. ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿಯೂ ಇರಲಿದೆಯಂತೆ. ಅಲ್ಲದೇ, ಅನೇಕ ಊಹಾಪೋಹಗಳಿಗೆ ಈ ಪುಸ್ತಕ ಉತ್ತರವಾಗಿ ನಿಲ್ಲಬಲ್ಲದು. ಗೊತ್ತಿರದ ರಜನಿಯನ್ನು ಗೆಳೆಯ ಅನ್ನುವ ಆಪ್ತತೆಯ ಮೂಲಕ ಅಶೋಕ್ ಅವರು ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ‘ಗೆಳೆಯ ಶಿವಾಜಿ’ ರಜನಿಕಾಂತ್ ಜೀವನದ ದಿ ಬೆಸ್ಟ್ ಪುಸ್ತಕವೂ ಆಗಿದೆ. ಗಿರಿಜಾ ಲೋಕೇಶ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದರೆ, ಬೆಂಗಳೂರಿನ ಬೀ ಕಲ್ಚರ್ ಪ್ರಕಾಶನ ಈ ಪುಸ್ತಕವನ್ನು ಹೊರ ತಂದಿದೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್
Advertisement
Advertisement
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಡಿಸೆಂಬರ್ 12ರ ಸಂಜೆ 5.30ಕ್ಕೆ ಈ ಪುಸ್ತಕ ಬಿಡುಗಡೆ ಆಗುತ್ತಿದ್ದು, ಅಗ್ರಹಾರ ಕೃಷ್ಣಮೂರ್ತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಟ ನೀನಾಸಂ ಸತೀಶ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರೆ, ನಿರ್ದೇಶಕಿ ಸುಮನಾ ಕಿತ್ತೂರ್ ಕೃತಿಯನ್ನು ಪರಿಚಯಿಸುತ್ತಾರೆ. ಸಿ.ಎಸ್.ದ್ವಾರಕನಾಥ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ.