ಮುಂಬೈ: ನಿದ್ದೆ ಕಣ್ಣಿನಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿ ರೈಲು ಬರುತ್ತಿದ್ದಾಗ ಹಳಿಗೆ ತಳ್ಳಿ ಹತ್ಯೆಗೈದು, ಇಬ್ಬರು ಮಕ್ಕಳೊಂದಿಗೆ ವ್ಯಕ್ತಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಕೃತ್ಯದ ವೀಡಿಯೋ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ವ್ಯಕ್ತಿಯ ಪತ್ನಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ನಕಲಿ ಸ್ವಾಮಿಯ ಕಾಮ ಪುರಾಣ – 7 ವರ್ಷದಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಪ್ಲಾಟ್‍ಫಾರ್ಮ್ ಬೆಂಚ್‍ನಲ್ಲಿ ಮಲಗಿದ್ದ ಮಹಿಳೆಯನ್ನು ವ್ಯಕ್ತಿ ಎಬ್ಬಿಸಿದ್ದಾನೆ. ನಂತರ ಕೆಲವು ಸೆಕೆಂಡುಗಳ ಕಾಲ ಇಬ್ಬರು ಮಾತನಾಡುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಮಹಿಳೆಯನ್ನು ಹಳಿಗಳ ಕಡೆಗೆ ಎಳೆದುಕೊಂಡು ಹೋಗಿ ರೈಲು ಬರುತ್ತಿದ್ದಂತೆ ಅವಳನ್ನು ಏಕಾಏಕಿ ತಳ್ಳಿದ್ದಾನೆ. ಬಳಿಕ ಮಹಿಳೆ ಮೇಲೆ ಅವಧ್ ಎಕ್ಸ್‍ಪ್ರೆಸ್ ರೈಲು ಹರಿದು ಆಕೆ ಸಾವನ್ನಪ್ಪಿದ್ದಾಳೆ. ಕೂಡಲೇ ವ್ಯಕ್ತಿ ಪಕ್ಕದಲ್ಲಿಯೇ ಮಲಗಿದ್ದ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಓಡಿ ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಭಾನುವಾರ ಮಧ್ಯಾಹ್ನದಿಂದ ವ್ಯಕ್ತಿ ಹಾಗೂ ಮಹಿಳೆ ನಿಲ್ದಾಣದಲ್ಲಿದ್ದರು. ಆದರೆ ಘಟನೆಯ ನಂತರ ವ್ಯಕ್ತಿ ಮೊದಲು ದಾದರ್‌ಗೆ ಹೋಗಿ ಅಲ್ಲಿಂದ ಕಲ್ಯಾಣ್‍ಗೆ ಹೋಗಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ವಸಾಯಿ ನಿಲ್ದಾಣವು ಮುಂಬೈ ಉಪನಗರ ರೈಲ್ವೆ ಜಾಲದ ಪಶ್ಚಿಮ ಮಾರ್ಗ ಮತ್ತು ವಸಾಯಿ ರಸ್ತೆ-ರೋಹಾ ಮಾರ್ಗದಲ್ಲಿದೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್