ರಾಯ್‍ಪುರ್: ಮದುವೆ ಸಮಾರಂಭದ ವೇಳೆ ಅವಘಡವೊಂದು ನಡೆದು ಅತಿಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಇಲ್ಲಿನ ಜಾಂಜ್‍ಗಿರ್ ಚಂಪಾ ಜಿಲ್ಲೆಯಲ್ಲಿ ಮದುವೆಯ ಮೆರವಣಿಗೆ ವೇಳೆ ಸಂಬಂಧಿಕರು ಹಾಗೂ ಸ್ನೇಹಿತರು ರಸ್ತೆ ಮೇಲೆ ಡ್ಯಾನ್ಸ್ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ವರ ಕುಳಿತಿದ್ದ ಎಸ್‍ಯುವಿ ಕಾರ್ ಇದ್ದಕ್ಕಿದ್ದಂತೆ ಜನರ ಮೇಲೆ ಹರಿದಿದೆ. ಪರಿಣಾಮ 25 ಮಂದಿಗೆ ಗಾಯಗಳಾಗಿದ್ದು, 9 ಜನರ ಸ್ಥಿತಿ ಗಂಭೀರವಾಗಿದೆ. ಘಟನೆಯ ವಿಡಿಯೋ ಲಭ್ಯವಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
Advertisement
ಮೆರವಣಿಗೆ ಜೊತೆ ನಿಧಾನವಾಗಿ ಸಾಗುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ವರ ಕುಳಿತಿದ್ದ. ಹೆಂಗಸರು, ಪುರುಷರು ಹಾಗೂ ಮಕ್ಕಳು ಅಲ್ಲಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾರಿನ ಚಾಲಕ ಬ್ರೇಕ್ ಬದಲು ಆಕ್ಸಿಲರೇಟರ್ ತುಳಿದಿದ್ದು, ಹಲವಾರು ಜನರ ಮೇಲೆ ಕಾರ್ ಹರಿಸಿದ್ದಾನೆ. ನಂತರ ರಿವರ್ಸ್ ತೆಗೆಯಲು ಯತ್ನಿಸಿದ್ದು, ಆಗ ಇನ್ನೂ ಹಲವರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಚಾಲಕ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಚಾಲಕ ಮದ್ಯಪಾನ ಮಾಡಿದ್ದನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ವರನ ಜೊತೆ ಕೆಲವು ಮಕ್ಕಳು ಕೂಡ ಕಾರಿನಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.