ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದಕ್ಕಾಗಿ ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಅವರಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಈ ವೀಡಿಯೋವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷದ ವಕ್ತಾರ ವಿನಾಯಕ್ ಅಂಬೇಕರ್ ಅವರ ಮೇಲೆ ಎನ್‍ಸಿಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಬಿಜೆಪಿಯವರ ವಿರುದ್ಧ ನಡೆಸಿರುವ ಈ ದಾಳಿಯನ್ನು ನಾನು ಖಂಡಿಸುತ್ತೇನೆ. ಈ ಎನ್‍ಸಿಪಿ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸಿಎಂ ಕಾರ್ಯಕ್ರಮಕ್ಕೂ ತಟ್ಟಿತು ಲೋಡ್ ಶೆಡ್ಡಿಂಗ್ ಬಿಸಿ
Advertisement
महाराष्ट्र प्रदेश भारतीय जनता पार्टीचे प्रवक्ते प्रा. विनायक आंबेकर यांच्या वर राष्ट्रवादीच्या गुंडांनी भ्याड हल्ला केला असून, भाजपाच्या वतीने मी या हल्ल्याचा तीव्र शब्दांत निषेध व्यक्त करतो. राष्ट्रवादीच्या या गुंडांवर तात्काळ कारवाई झालीच पाहिजे !@BJP4Maharashtra pic.twitter.com/qR7lNc1IEN
— Chandrakant Patil (@ChDadaPatil) May 14, 2022
Advertisement
ವೀಡಿಯೋದಲ್ಲಿ ಚೇರ್ ಮೇಲೆ ಅಂಬೇಕರ್ ಅವರೊಂದಿಗೆ ಕೆಲವರು ವಾಗ್ವಾದ ನಡೆಸುತ್ತಿರುವಾಗ, ವ್ಯಕ್ತಿಯೋರ್ವ ಕಪಾಳಮೋಕ್ಷ ಮಾಡಿರುವುದನ್ನು ಕಾಣಬಹುದಾಗಿದೆ. ಶನಿವಾರ ಶರದ್ ಪವಾರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದಡಿ ಮರಾಠಿ ನಟಿ ಕೇತಕಿ ಚಿತಳೆ ಅವರನ್ನು ಪೊಲೀಸರು ಬಂಧಿಸಿದ್ದು, ಮೇ 18ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ಬಾಲಕಿಯ ಮೇಲೆ ಹರಿದ ಕಾರು- ಆಕ್ರೋಶಗೊಂಡು ಚಾಲಕನಿಗೆ ಬೆಂಕಿ ಹಚ್ಚಿದ ಜನ
Advertisement
ನರಕ ಕಾಯುತ್ತಿದೆ ಮತ್ತು ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ ಎಂದು ಪೋಸ್ಟ್ ಮಾಡಲಾಗಿದೆ. ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಪವಾರ್ ಅವರ ಹೆಸರನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.