* ವಿಶೇಷ ವರದಿ
ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ತೆರೆಕಂಡು ಈಗಾಗಲೇ ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಶುಭ ಸಂದರ್ಭದಲ್ಲಿಯೇ ಪಬ್ಲಿಕ್ ಟಿವಿ ಜೊತೆ ಖಳನಟರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.
ಕೆಜಿಎಫ್ “ಕೇಡೀಸ್” ಎಂಬ ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಖಳನಾಯಕ ವಿನಯ್, ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುಃಖ ಹಾಗೂ ಸಂತಸದ ವಿಚಾರವನ್ನು ಹಂಚಿಕೊಂಡರು. ಅಲ್ಲದೇ ಇದೇ ವೇಳೆ ಕೆಜಿಎಫ್ ಸಿನಿಮಾ ತಂಡ ಅನ್ನೋದಕ್ಕಿಂತ ಅದೊಂದು ನನ್ನ ಕುಟುಂಬ ಅನ್ನುವ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಅರ್ಪಿಸಿದ್ರು.
Advertisement
Advertisement
ವಿನಯ್ ಹೇಳಿದ ಬ್ಯಾಡ್ ನ್ಯೂಸ್ ಏನು..?
ಸಿನಿಮಾದಿಂದ ಹೊರಗಡೆ ಕುಟುಂಬ ಪಾಲನೆ ಮುಖ್ಯವಾಗುತ್ತದೆ. ಹೆರಿಗೆಯಾದ ಬಳಿಕ 20 ದಿನದಲ್ಲೇ ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡಿದ್ದೆವು. ಹೀಗಾಗಿ ನಾನು ಕುಟುಂಬ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಿದ್ದೆ. ಮಗು ಕಳೆದುಕೊಂಡಿರುವ ನೋವು ನಂಗೆ ಎಷ್ಟು ಇತ್ತೋ ಅಷ್ಟೇ ನೋವು ನಮ್ಮ ತಾಯಿ, ಪತ್ನಿ, ಅತ್ತೆ-ಮಾವ ಹಾಗೂ ನಮ್ಮ ಸಂಬಂಧಿಕರಿಗೂ ಇತ್ತು. ಪತ್ನಿಗೆ ಹೆರಿಗೆಯಾಗಿ ಮಗು 20 ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿತ್ತು ಎಂದು ದುಃಖದ ಸುದ್ದಿಯೊಂದನ್ನು ಹಂಚಿಕೊಂಡರು. ಇದನ್ನೂ ಓದಿ: ಯಶ್ ಬಗ್ಗೆ ಕೆಜಿಎಫ್ ಕೇಡೀಸ್ ಖಡಕ್ ಮಾತು
Advertisement
ಕೆಜಿಎಫ್ ನನಗೆ ಹೊಸ ತಂಡವಾಗಿದೆ. ರಾಮ್, ಲಕ್ಕಿ, ಅವಿನಾಶ್ ಸರ್ ಇವರೆಲ್ಲರೂ ನನಗೆ ನೈತಿಕವಾಗಿ ಬೆಂಬಲಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನಲ್ಲಿದ್ದರು. ನಾನು ಮಾತ್ರ ಮೈಸೂರಿನಲ್ಲಿದೆ. ಆದ್ರೆ ಎಲ್ಲರೂ ನನಗೆ ಬೆಂಬಲ ನೀಡುತ್ತಿದ್ದರು. ನಾನು ಮಾತನಾಡುವಾಗ ಸ್ವಲ್ಪ ಎಮೋಷನಲ್ ಆಗಿದ್ದೇನೆ ಅಂತ ಗೊತ್ತಾದ ತಕ್ಷಣ ಇವರೆಲ್ಲರೂ ಮರುದಿನವೇ ಆಸ್ಪತ್ರೆಗೆ ಬರುತ್ತಿದ್ದರು. ನನ್ನ ಜೊತೆ ಇದ್ದು, ನನಗೆ ಸಪೋರ್ಟ್ ಮಾಡುತ್ತಿದ್ದರು ಎಂದು ಹೇಳಿದ್ರು. ಇದನ್ನೂ ಓದಿ: ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ
Advertisement
ನಂತರ ಪ್ರಶಾಂತ್ ಸರ್ ಯಾವಾಗ ಬೆಂಗಳೂರಿಗೆ ಬರುತ್ತಿದ್ದೀಯಾ ಅಂತ ಕೇಳಿದ್ರು. ಆವಾಗ ನಾನು ಸರ್, ನಾಳೆ, ನಾಡಿದ್ರಲ್ಲಿ ಬರುತ್ತೇನೆ ಅಂದಾಗ, ಹೇಗೆ ಬರ್ತಿಯಾ..? ಗಾಡಿ ಕಳುಹಿಸಲಾ..? ಕಾರ್ ಕಳುಹಿಸ್ತೇನೆ. ನನ್ನ ಪತ್ನಿ ಎಲ್ಲರೂ ಮೈಸೂರಿನಲ್ಲಿದ್ದರು. ಆದ್ರೆ ನೀನು ನಿನ್ನ ಮನೆಗೆ ಹೋಗಬೇಡ ಎಂದು ಹೇಳಿದ್ದರು. ಸಂಜೆ ವರ್ಕ್ ಶಾಪ್ ಗೆ ಬಂದೆ. ಅಲ್ಲಿ ಸರಿ ಸುಮಾರು 3-4 ದಿನ ಇದ್ದೆ. ಪ್ರಶಾಂತ್ ಅವರು ಅಷ್ಟೊಂದು ಬ್ಯುಸಿಯಾಗಿದ್ದರೂ ಕೂಡ 7 ಗಂಟೆಯಿಂದ ನನ್ನ ಜೊತೆ ಕುಳಿತು ಪ್ರೇರೆಪಣೆಯ ಮಾತುಗಳನ್ನಾಡುತ್ತಿದ್ದರು. ಈ ಮೂಲಕ ನನ್ನ ಯೋಚನೆಗಳನ್ನು ಬದಲಾಯಿಸುತ್ತಿದ್ದರು. ಶೂಟಿಂಗ್ ನಲ್ಲಿ ಯಾರು ಇರಲಿ ಬಿಡಲಿ, ನೀನು ಅಲ್ಲಿಗೆ ಬಂದುಬಿಡು ಎಂದು ಹೇಳುತ್ತಿದ್ದರು ಅಂದ್ರು. ಇದನ್ನೂ ಓದಿ: ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ
ಯಶ್ ಅಣ್ಣನೂ ಕರೆ ಮಾಡುತ್ತಿದ್ದರು. ರಾಮ್ ಎಲ್ಲಾ ಸಮಯದಲ್ಲಿಯೂ ಜೊತೆಗಿದ್ದರು. ಟೈಮ್ ಸಿಕ್ಕಾಗ ಅವನನ್ನು ಕರೆದುಕೊಂಡು ಬಾ, ಶೂಟಿಂಗ್ ನಲ್ಲಿ ಅವನು ನಮ್ಮ ಜೊತೆ ಇರಲಿ ಎಂದು ರಾಮ್ ಜೊತೆ ಯಶ್ ಅಣ್ಣ ಹೇಳುತ್ತಿದ್ದರು. ಹೀಗಾಗಿ ಇದನ್ನು ಬರೀ ಸಿನಿಮಾ ಕೆಜಿಎಫ್ ಟೀಂ ಎಂದು ಹೇಳೋದಕ್ಕಿಂತ ನನ್ನ ಕುಟುಂಬ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ವಿನಯ್ ಹೇಳಿದ್ರು.
ಗೆಳೆಯರು, ಸಂಬಂಧಿಕರು ಎಲ್ಲರೂ ಇದ್ದರು. ಅವರೆಲ್ಲರೂ ನನ್ನ ಬಾಲ್ಯದ ಗೆಳೆಯರು. ಅವರಿಗೆ ವಿನಯ್ ಯಾರು, ಹೇಗೆ ಅಂತ ಎಲ್ಲವೂ ಗೊತ್ತು. ಆದ್ರೆ ಕೆಜಿಎಫ್ ಟೀಂ ಗೆ ನನ್ನ ಪರಿಚಯವಾಗಿದ್ದು ಕೇವಲ 2 ಅಥವಾ ಎರಡೂವರೆ ವರ್ಷದಳಿಂದೀಚೆಗೆ ಅಷ್ಟೇ. ಲಕ್ಕಿ ಭಾಯ್, ರಾಮ್ ಬಿಟ್ರೆ ಉಳಿದವರಿಗೆಲ್ಲ ನಾನು ಹೊಸಬನಾಗಿದ್ದೆನು. ಆದ್ರೆ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೀಗಾಗಿ ಒಂದು ಒಳ್ಳೆಯ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದ್ದಕ್ಕೆ ಪ್ರಶಾಂತ್ ಸರ್ ಗೆ ಅಭಿನಂದನೆಗಳನ್ನು ವಿನಯ್ ಸಲ್ಲಿಸಿದ್ರು. ಇದನ್ನೂ ಓದಿ: ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಇನ್ನಿಲ್ಲ!
ಗುಡ್ ನ್ಯೂಸ್:
ಮಗು ತೀರಿಕೊಂಡ ನಂತರ ಪತ್ನಿ ಎರಡನೇ ಬಾರಿ ಪ್ರೆಗ್ನೆಂಟ್ ಆದ್ರು. 9ನೇ ತಾರೀಕಿನಂದು ಒರಾಯನ್ ಮಾಲ್ ನಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿತ್ತು. ಹೀಗಾಗಿ ನಾಳೆ ಟ್ರೇಲರ್ ರಿಲೀಸ್ ಎಂದು ರಾತ್ರಿಯೆಲ್ಲ ನಿದ್ದೇನೆ ಬರುತ್ತಿರಲಿಲ್ಲ. 9ರಂದು ಕಾರ್ಯಕ್ರಮಕ್ಕೆ ಹೊರಡಲು ರೆಡಿಯಾಗುತ್ತಿದ್ದೆ. ಈ ಸಮಯದಲ್ಲಿ ಪತ್ನಿಗೆ ಪ್ರಸವ ನೋವು ಬಂದಿದೆ. ಆದ್ರೆ ಕೆಜಿಎಫ್ ಮೂವಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿದೆ ಎಂದು ಆಕೆ ನನ್ನ ಬಳಿ ಹೇಳಿಕೊಂಡಿಲ್ಲ. ಹೀಗಾಗಿ ಅತ್ತೆ ಬಂದು ನನ್ನ ಬಳಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಹೇಳಿದ್ರು. ಆವಾಗ ನಾನು ಟ್ರೇಲರ್ ಆದ್ರೆ ಏನಂತೆ ಇನ್ನೊಂದು ದಿನ ನೋಡುವೆ ಎಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಚ್ಚರಿ ಹಾಗೂ ಖುಷಿಯ ವಿಚಾರವೆಂದರೆ 2.30 ಟ್ರೇಲರ್ ರಿಲೀಸ್, 3.30ಗೆ ನನಗೆ ಗಂಡು ಮಗುವಾಯಿತು. ಹೀಗಾಗಿ ಎಲ್ಲರೂ ಎರಡೂವರೆಗೆ ಟ್ರೇಲರ್, ಮೂರೂವರೆಗೆ ಮಗು ರಿಲೀಸ್ ಆಯ್ತು ಎಂದು ತಮಾಷೆ ಮಾಡಿರುವುದಾಗಿ ವಿನಯ್ ತನ್ನ ಸಂತಸ ಹಂಚಿಕೊಂಡರು.
ಸಂಬಂಧಿಕರು, ಫ್ರೆಂಡ್ಸ್ ಇದ್ದರೂ ಕೆಜಿಎಫ್ ಕುಟುಂಬದ ಬೆಂಬಲ ಪ್ರತಿ ನಿಮಿಷಕ್ಕೂ ಇಲ್ಲದಿದ್ದರೆ ಇಷ್ಟು ಬೇಗ ನಾನು ಕಳೆದುಕೊಂಡ ಮಗುವಿನ ದುಃಖದಿಂದ ರಿಕವರಿ ಆಗುತ್ತಿರಲಿಲ್ಲ ಎಂದು ವಿನಯ್, ಕೆಜಿಎಫ್ ಟೀಂ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ರಾಮಾಚಾರಿಯ ಜೀವನವನ್ನು 5 ನಿಮಿಷದಲ್ಲಿ ಬಿಚ್ಚಿಟ್ಟ ನಟ ವಿಶಾಲ್
ಒಟ್ಟಿನಲ್ಲಿ ನಾವು ಸಾಧಿಸಲು ಛಲ, ಹಠ ಜೊತೆಗೆ ಆ ವಾತಾವರಣನೂ ಬೇಕಾಗುತ್ತದೆ. ಆ ವಾತವಾರಣವನ್ನು ಕಟ್ಟಿಕೊಡೋರು ಬೇರಾರು ಅಲ್ಲ ಅದು ನಮ್ಮ ಹಿತೈಷಿಗಳು ಅಂತ ನಟ ವಶಿಷ್ಠ ಸಿಂಹ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv