ಕೋಲಾರ: ಕೆಪಿಎಸ್‌ಸಿ ಇಂದು (ಭಾನುವಾರ) ನಡೆಸಿರುವ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ ಕಂಡುಬಂದಿದೆ. ಕೋಲಾರದ (Kolara) ಹಾಗೂ ವಿಜಯಪುರದ ಕೆಲವು ಪರೀಕ್ಷಾ ಕೇಂದ್ರಗಳ ಮುಂದೆ ನಿಂತು ಪರೀಕ್ಷಾರ್ಥಿಗಳು ಸರ್ಕಾರ (Karnataka Government) ಹಾಗೂ ಕೆಪಿಎಸ್‌ಸಿ (KPSC) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರ, ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧೆಡೆ ದೂರುಗಳು ಕೇಳಿಬಂದಿದೆ. ಕೆಪಿಎಸ್‌ಸಿಯಿಂದ ನೀಡಲಾಗಿದ್ದ ಪ್ರವೇಶ ಪತ್ರದ ಸಂಖ್ಯೆಗೂ ಹಾಗೂ ಓಎಂಆರ್ ನಂಬರಿಗೂ ತಾಳೆಯಾಗದೇ, ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೇ 10 ಗಂಟೆಗೆ ಆರಂಭವಾಗಬೇಕಾದ ಪರೀಕ್ಷೆ 1 ಗಂಟೆ ತಡವಾಗಿ ಆರಂಭವಾಗಿದೆ. ಈ ವೇಳೆ ಪರೀಕ್ಷಾ ಕೇಂದ್ರದಲ್ಲೇ ಪ್ರಶ್ನೆ ಮಾಡಿದಕ್ಕೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!
Advertisement
Advertisement
ಕೆಲ ಕಾಲ ಪರೀಕ್ಷಾರ್ಥಿಗಳು ಕೆಪಿಎಸ್‌ಸ್‌ಯಿಂದ ಈ ಬಾರಿಯೂ ಮತ್ತೆ ಯಾರದೊ ಪರೀಕ್ಷೆಯನ್ನು ಮತ್ತೆ ಯಾರದೊ ಕೈಯಲ್ಲಿ ಬರೆಸುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಕಾರಣ ಪ್ರವೇಶ ಪತ್ರದಲ್ಲಿರುವ ಸಂಖ್ಯೆ ಪರೀಕ್ಷಾರ್ಥಿಗಳಿಗೆ ನೀಡಲಾಗಿದ್ದ ಓಎಂಆರ್ ಶೀಟ್‌ನಲ್ಲೂ ಇರಬೇಕು. ಆದ್ರೆ ಪ್ರವೇಶ ಪತ್ರದ ಸಂಖ್ಯೆ ಓಎಂಆರ್ ಶ್ರೀಟ್‌ನಲ್ಲಿ ಇರಲಿಲ್ಲ ಇದನ್ನು ಪ್ರಶ್ನೆ ಮಾಡಿದಾಗ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಅದನ್ನು ಸರಿಮಾಡಿಕೊಂಡು ಬರೆಯಿರಿ ಇಲ್ಲಾ ಎದ್ದು ಹೋಗಿ ಎಂದು ಧಮ್ಕಿ ಹಾಕಿರುವ ಆರೋಪ ಕೂಡಾ ಕೇಳಿ ಬಂದಿದೆ.
Advertisement
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಡೆದ ಪರೀಕ್ಷೆ ನಂತರ ಪರೀಕ್ಷೆ ನಂತರ ಪರೀಕ್ಷಾ ಕೇಂದ್ರದಿಂದ ಹೊರ ಬಂದ ಪರೀಕ್ಷಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಪಿಎಸ್‌ಸಿ ಈ ಬಾರಿಯೂ ಎಡವಟ್ಟು ಮಾಡಿದ್ದು ಸರಿಯಾದ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ 5,718 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪ್ರೇಮ – ಬಾಲಕಿ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ
Advertisement
ಈ ಪೈಕಿ ನಾಲ್ಕೈದು ಪರೀಕ್ಷಾ ಕೇಂದ್ರಗಳಲ್ಲಿ ಇದೇ ಸಮಸ್ಯೆ ಆಗಿದ್ದು ನೂರಾರು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಪರೀಕ್ಷಾರ್ಥಿಗಳ ಸಮಸ್ಯೆಯನ್ನು ಆಲಿಸುವ ಯಾರೊಬ್ಬ ಅಧಿಕಾರಿಗಳು ಇಲ್ಲದ ಕಾರಣ ಪರೀಕ್ಷಾರ್ಥಿಗಳು ನಮಗೆ ಅನ್ಯಾಯವಾಗಿದೆ ಮತ್ತೊಮ್ಮ ಮರು ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕೆಪಿಎಸ್ ಸಿ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯಪುರದಲ್ಲೂ ಅವಾಂತರ:
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟಾದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆಯಾಗಿದೆ. ಒಎಂಅರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲಾಗಿ ಸಮಸ್ಯೆ ಉಂಟಾಗಿತ್ತು. ನಗರದ ಸಿಕ್ಯಾಬ್ ಸಂಸ್ಥೆಯ 2 ಕೇಂದ್ರಗಳು, ಮರಾಠಿ ವಿದ್ಯಾಲಯ, ವಿಕಾಸ ವಿದ್ಯಾಲಯದಲ್ಲಿನ 4 ಕೇಂದ್ರಗಳಲ್ಲಿ ಒಎಂಆರ್ ನಂಬರ್ ಹಾಗೂ ನೋಂದಣಿ ನಂಬರ್ ಬದಲಾಗಿ ತೊಂದರೆ ಆಗಿತ್ತು. ಕಾರಣ ಪರೀಕ್ಷಾ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ರಿಶಿ ಆನಂದ ಭೇಟಿ ನೀಡಿದ್ದರು. ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಿದ ಅಧಿಕಾರಿಗಳು ಕೆಪಿಎಸ್‌ಸಿ ಅಧಿಕಾರಿಗಳ ಜೊತೆಗೆ ಮಾತನಾಡಿದ ಎಡಿಸಿ ಹಾಗೂ ಜಿಪಂ ಸಿಇಓ ಪರೀಕ್ಷಾರ್ಥಿಗಳ ನೋಂದಣಿ ಸಂಖ್ಯೆಯನ್ನು ಓಎಂಆರ್ ಶೀಟ್‌ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಲು ಸಲಹೆ ನೀಡಿದ್ದಾರೆ. ಅಲ್ಲದೇ ಪರೀಕ್ಷೆ ಎಷ್ಟು ವಿಳಂಭವಾಗಿದೆಯೋ ಅಷ್ಟು ಹೆಚ್ಚುವರಿ ಸಮಯ ನೀಡೋದಾಗಿ ಹೇಳಿ ಪರೀಕ್ಷಾರ್ಥಿಗಳ ಸಮಸ್ಯೆ ಈ ಮೂಲಕ ಬಗೆಹರಿಸಿ ಪರೀಕ್ಷೆ ಬರೆಯುವಂತೆ ಮನವೋಲಿಕೆ ಮಾಡಿದ್ದಾರೆ. ಇನ್ನು ಅಧಿಕಾರಿಗಳ ಸ್ಪಷ್ಟನೆಗೆ ಒಪ್ಪಿ ಪರೀಕ್ಷೆ ಬರೆಯಲು ಪರೀಕ್ಷಾರ್ಥಿಗಳು ತೆರಳಿದ್ದು, ಸಮಸ್ಯೆ ಬಗೆ ಹರಿದಿದೆ.