ನವದೆಹಲಿ/ಜೋಹನ್ಸ್ಬರ್ಗ್: ಓಮಿಕ್ರಾನ್ ವೇರಿಯಂಟ್ ಒಳ್ಳೆಯದೇ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಒಂದು ಅಧ್ಯಯನ ತಿಳಿಸಿದೆ. ಡಬಲ್ ಡೋಸ್ ಪಡೆದವರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡರೇ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ವರದಿ ಹೊರಬಿದ್ದಿದೆ.
ಓಮಿಕ್ರಾನ್ ಸೋಂಕಿತರಾದವರಲ್ಲಿ ಸೋಂಕು ನಿರೋಧಕ ಶಕ್ತಿ ಉತ್ಪತ್ತಿ ಆಗುತ್ತದೆ. ಇದು ಡೆಲ್ಟಾ ಸೇರಿ ಇತರೆ ವೇರಿಯಂಟ್ಗಳು ದಾಳಿ ಮಾಡದಂತೆ ತಡೆಯುತ್ತದೆ ಎಂದು ವರದಿ ಸ್ಪಷ್ಟಪಡಿಸಿದೆ. ಈ ನಡುವೆ ಓಮಿಕ್ರಾನ್ ಆರ್ಭಟಕ್ಕೆ ತತ್ತರಿಸಿದ್ದ ಬ್ರಿಟನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ರೆ ಕಳೆದ ಕೆಲ ದಿನಗಳಿಂದ ಅಲ್ಲಿ ಸೋಂಕು ಇಳಿಯುತ್ತಾ ಬಂದಿದೆ. ನಿನ್ನೆ 1.08 ಲಕ್ಷ ಕೇಸ್ ಬಂದಿದೆ. ಹೀಗಾಗಿ ಕೋವಿಡ್ ನಿಯಮಗಳನ್ನು ಸಡಿಲಿಸಲು ಬ್ರಿಟನ್ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ – ಒಟ್ಟು 47,754, ಬೆಂಗ್ಳೂರಲ್ಲಿ 30,540
ಮುಂದಿನ ಗುರುವಾರದಿಂದ ಅನ್ವಯ ಆಗುವಂತೆ, ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಬ್ರಿಟನ್ನಲ್ಲಿ ಓಮಿಕ್ರಾನ್ ಪರಾಕಾಷ್ಟೆಯ ಹಂತ ತಲುಪಿಯಾಗಿದೆ. ಹೀಗಾಗಿಯೇ ಮಾಸ್ಕ್, ವರ್ಕ್ ಫ್ರಮ್ ಹೋಂ, ಸಭೆ ಸಮಾರಂಭಗಳಿಗೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯದಂತಹ ನಿಯಮಗಳನ್ನು ಸಡಿಲಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬೊರೀಸ್ ಜಾನ್ಸನ್ ಹೇಳಿದ್ದಾರೆ. ಜಗತ್ತಿನಲ್ಲಿ ನಿನ್ನೆ ದಾಖಲೆಯ 35 ಲಕ್ಷ ಕೇಸ್ ಬಂದಿದೆ. ಅಮೆರಿಕಾ 7.10 ಲಕ್ಷ, ಫ್ರಾನ್ಸ್ನಲ್ಲಿ 4.36 ಲಕ್ಷ ಕೇಸ್ ಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ
ಇಂದು ಭಾರತದಲ್ಲಿ ಒಟ್ಟು 3,17,532 ಪ್ರಕರಣ ವರದಿಯಾಗಿದ್ದು, ನಿನ್ನೆಗಿಂತ 12.2% ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಇಂದು 491 ಮಂದಿ ಮರಣಹೊಂದಿದ್ದಾರೆ. ಈ ಮೂಲಕ ಒಟ್ಟು ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 4,87,693ಕ್ಕೆ ಏರಿಕೆ ಕಂಡಿದೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಬಂದಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಅಧೀಕೃತಗೊಳಿಸಿದೆ. ಇದಲ್ಲದೆ ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭವಾಗಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.