ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಸಹ ಆಂಧ್ರಪ್ರದೇಶ ಮತ್ತು ಚಂಡೀಗಢ ರಾಜ್ಯಗಳಲ್ಲಿ ಮೊದಲ ಬಾರಿಗೆ ತಲಾ ಒಂದು ಪ್ರಕರಣ ವರದಿಯಾಗಿದೆ.
Advertisement
ನವೆಂಬರ್ 22ರಲ್ಲಿ ಇಟಲಿಯಿಂದ ಚಂಡೀಗಢದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಈತನನ್ನು ಮೊದಲು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಕ್ವಾರಂಟೈನ್‍ಲಿದ್ದ ಸೋಂಕಿತನ ಮಾದರಿಯನ್ನು ಡಿ.1ರಂದು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಿದಾಗ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಇದನ್ನೂ ಓದಿ: ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅಭಿವೃದ್ಧಿ
Advertisement
ಸೋಂಕಿತನಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಇಟಲಿಯಲ್ಲಿ ಫೈಜರ್ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡಿದ್ದಾನೆ. ಸದ್ಯ ಸೋಂಕಿತ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾನೆ. ಆರಂಭದಲ್ಲಿ ಕ್ವಾರಂಟೈನ್‍ನಲ್ಲಿದ್ದಾಗ ಕುಟುಂಬದ 7 ಮಂದಿ ಈತನ ಸಂಪರ್ಕದಲ್ಲಿದ್ದರು. ಎಲ್ಲರ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಇಂದು ಮತ್ತೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
Advertisement
ಐಲ್ರ್ಯಾಂಡ್‍ನಿಂದ ಆಂಧ್ರಪ್ರದೇಶಕ್ಕೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಇದನ್ನೂ ಓದಿ: ಮಾರ್ಚ್, ಮೇ ಹೊತ್ತಿಗೆ ದೇಶದಲ್ಲಿ ಕೊರೊನಾ ಇರಲ್ಲ: ವಿನಯ್ ಗುರೂಜಿ
ಈಗಾಗಲೇ ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 7 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ವಿಶ್ವದಲ್ಲಿ ಸುಮಾರು 59 ದೇಶಗಳು ಓಮಿಕ್ರಾನ್ ಪೀಡಿತವಾಗಿವೆ.