ಮುಂಬೈ: ಪುಣೆಯ ಬೀದಿಗಳಲ್ಲಿ ವೃದ್ಧೆಯೊಬ್ಬರು ಜೀವನ ನಡೆಸಲು ಪೆನ್ನುಗಳನ್ನು ಮಾರಾಟ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ.
ಈ ಫೋಟೋವನ್ನು ಶಿಖಾ ರಾಠಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ರತನ್ ಜೀವನ ನಡೆಸುವುದಕ್ಕಾಗಿ ಪುಣೆಯ ಎಂಜಿ ರಸ್ತೆಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುತ್ತಾರೆ. ಭಿಕ್ಷೆ ಬೇಡುವುದನ್ನು ನಿರಾಕರಿಸಿ ತನ್ನ ಜೀವನವನ್ನು ಗೌರವ ಹಾಗೂ ಸ್ವಾವಲಂಬಿಯಾಗಿ ನಡೆಸಲು ವಿವಿಧ ರೀತಿಯ ಬಣ್ಣ, ಬಣ್ಣದ ಪೆನ್ನುಗಳನ್ನು ಬಾಕ್ಸ್‌ನಲ್ಲಿ ಹಿಡಿದುಕೊಂಡು ನಗುಮುಖದಿ ಮಾರಾಟ ಮಾಡುತ್ತಿರುವ ಫೋಟೋವನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕತ್ರಿನಾ ಜೊತೆಗಿನ ಎಂಗೇಜ್‍ಮೆಂಟ್ ಬಗ್ಗೆ ಸುಳಿವು ಕೊಟ್ರಾ ವಿಕ್ಕಿ ಕೌಶಲ್ ?
ಜೊತೆಗೆ, ಬಾಕ್ಸ್ ಮೇಲೆ ನಾನು ಭಿಕ್ಷೆ ಬೇಡುವುದಿಲ್ಲ. ದಯವಿಟ್ಟು 10ರೂ.ಗೆ ನೀಲಿ ಬಣ್ಣದ ಪೆನ್ನನ್ನು ಖರೀದಿಸಿ, ಆಶೀರ್ವಾದಿಸಿ, ಧನ್ಯವಾದ ಎಂದು ಬರೆದಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಮಹಾಮಳೆಯ ಭೂಕುಸಿತಕ್ಕೆ ತತ್ತರಿಸಿದ ದೇವರ ನಾಡು – ಅವಶೇಷಗಳಡಿ 26 ಶವ ಪತ್ತೆ
View this post on Instagram
ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಇಂದು ನಾನು ಜೀವನದ ನಿಜವಾದ ನಾಯಕಿ ಹಾಗೂ ಚಾಂಪಿಯನ್ ರತನ್ ಅವರನ್ನು ನೋಡಿದೆ. ಇವರನ್ನು ನನ್ನ ಸ್ನೇಹಿರೊಂದಿಗೆ ಹೊರ ಹೋಗಿದ್ದಾಗ ಭೇಟಿಯಾದೆ. ಈ ವೇಳೆ ಬಾಕ್ಸ್ ಮೇಲೆ ಬರೆದಿರುವುದನ್ನು ಓದಿ ನನ್ನ ಸ್ನೇಹಿತರು ಪೆನ್ನನ್ನು ಖರೀದಿ ಮಾಡಿದರು. ಆಗ ರತನ್ ಬಹಳ ಸಂತೋಷಗೊಂಡು ನಗುಮುಖದಿ ಧನ್ಯವಾದ ತಿಳಿಸಿದರು. ಈ ವೇಳೆ ಅವರ ಮುಖದಲ್ಲಿ ಮಂದಹಾಸ, ಕೃತಜ್ಞತೆ ಹಾಗೂ ದಯೆ ಎದ್ದು ಕಾಣುತ್ತಿತ್ತು. ನಮಗೆ ಮತ್ತಷ್ಟು ಪೆನ್ನು ಖರೀದಿಸಬೇಕು ಎನಿಸಿತು. ಅವರ ವರ್ತನೆ ಮತ್ತು ಅವರ ಸಿಹಿಯಾದ ನಗು, ಸ್ವಾಭಿಮಾನ ನನಗೆ ಮತ್ತಷ್ಟು ಪೆನ್ನು ಖರೀದಿಸುವಂತೆ ಮಾಡಿತು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಂ.ಜಿ ರಸ್ತೆಗೆ ಯಾರಾದರೂ ಹೋದಾಗ ಈ ವೃದ್ಧೆಯಿಂದ ಮತ್ತಷ್ಟು ಪೆನ್ನುಗಳನ್ನು ಖರೀದಿಸುವಂತೆ ಮನವಿ ಮಾಡಿದ್ದಾರೆ.


