ಕೊಪ್ಪಳ: ವೃದ್ಧೆಯೊಬ್ಬರು ಬಸ್ ಮೇಲಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭಾವಚಿತ್ರ ನೋಡಿ ಫೋಟೋಗೆ ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವೀಡಿಯೋ ಈಗ ಭಾರೀ ವೈರಲ್ ಆಗಿದೆ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿನ ಬಸ್ಸಿನ ಮೇಲಿನ ಜಾಹೀರಾತು ಒಂದರಲ್ಲಿ ಪುನೀತ್ ರಾಜ್‍ಕುಮಾರ್ ಫೋಟೋ ಇದೆ. ಆ ಭಾವಚಿತ್ರವನ್ನು ನೋಡಿ ಅಜ್ಜಿ ಭಾವುಕರಾಗಿ ಫೋಟೊಗೆ ತಲೆ ಇಟ್ಟು ಮುತ್ತಿಟ್ಟಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕಾಡುತ್ತಿದೆ ನಿಗೂಢ ವೈರಲ್ ಜ್ವರ
ಅಷ್ಟೇ ಅಲ್ಲದೇ ಅಪ್ಪು ಭಾವಚಿತ್ರದ ಮೇಲಿದ್ದ ಧೂಳನ್ನು ತನ್ನ ಸೆರಗಿನಿಂದ ಸ್ವಚ್ಚಗೊಳಿಸಿದ್ದು, ಈ ದೃಶ್ಯವನ್ನು ಸ್ಥಳೀಯರು ದೂರದಿಂದ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ನೊಂದುಕೊಂಡು ಫೋಟೋವನ್ನು ಸೆರಗಿನಿಂದ ಸ್ವಚ್ಚ ಮಾಡಿದ ದೃಶ್ಯ ಎಂಥವರ ಹೃದಯವು ಮರಗುವಂತೆ ಮಾಡಿದೆ.
ಅಪ್ಪು ಕೇವಲ ಒಂದೇ ವರ್ಗಕ್ಕೆ ಮಾತ್ರ ಸಿಮೀತವಾಗಿಲ್ಲ. ಅವರನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟ ಪಡುತ್ತಾರೆ ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ. ಅಪ್ಪು ಅಗಲಿ 2 ವಾರದ ಮೇಲಾದರೂ ಅಭಿಮಾನಿಗಳು ಮಾತ್ರ ಅವರಿಗಾಗಿ ದಿನಕ್ಕೊಂದು ಕಾರ್ಯಕ್ರಮ ಮಾಡಿಕೊಂಡು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದ 3 ವಿಭಾಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಉತ್ತರಾಖಂಡ್