ಯಾದಗಿರಿ: ವಯಸ್ಸಾದ ಹೆತ್ತವರನ್ನು ದೂರವಿಡುವ ಇಂತಹ ಅಧುನಿಕ ಯುಗದಲ್ಲಿ ವೃದ್ಧೆಯಾದ ತನ್ನ ತಾಯಿ ಶತ ದಿನ ಪೂರೈಸಿದ ಹಿನ್ನಲೆಯಲ್ಲಿ ಹೆತ್ತಮ್ಮನನ್ನು ಮಕ್ಕಳು, ಮಮ್ಮಕ್ಕಳು ಸೇರಿ ಮರು ನಾಮಕಾರಣ ಮಾಡಿದ ಅಪರೂಪದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮದ ಕಾಳಪ್ಪ ಹಾಗೂ ವೆಂಕಣ್ಣ ಅವರು ತನ್ನ ತಾಯಿ ನಾಗಮ್ಮ ವಿಶ್ವಕರ್ಮ ಶತ ದಿನ ಪೂರೈಸಿದಕ್ಕೆ ದುಪ್ಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ಮರುನಾಮಕರಣ ಮಾಡಿ ಸಂಭ್ರಮಿಸಿದ್ದಾರೆ. ಅಜ್ಜಿ ಹಾಗೂ ಮರಿ ಮಮ್ಮಗನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದಾರೆ.
Advertisement
ನಾಗಮ್ಮ ವಿಶ್ವಕರ್ಮ ಅವರು ಶುಕ್ರವಾರ ಅಂದ್ರೆ ನಿನ್ನೆ ನೂರು ವರ್ಷ ವಯಸ್ಸು ಪೂರ್ಣಗೊಳಿಸಿದ್ದಾರೆ. ಜನ್ಮದಾತೆಯ ತೊಟ್ಟಿಲು ಕಾರ್ಯಕ್ರಮ ಮಾಡಿ, ಹೆತ್ತಬ್ಬೆಯ ಪಾದ ಪೂಜೆ ಮಾಡಿ ಬಳಿಕ ಮರು ನಾಮಕರಣ ಮಾಡಿದ್ದಾರೆ. ತನ್ನ ಮರಿಮಮ್ಮಗನ ಜೊತೆ ಮರು ನಾಮಕರಣ ಮಾಡಿದ್ದು ಅಜ್ಜಿ ನಾಗಮ್ಮಗೆ ಖುಷಿ ಕೊಟ್ಟಿದೆ.
Advertisement
ಮರಿ ಮೊಮ್ಮಗನಿಗೆ ಅನಿರುದ್ಧ ಎಂದು ನಾಮಕರಣ ಮಾಡಿದ್ದು ನಾಗಮ್ಮರಿಗೆ ಭಾಗ್ಯವಂತಿ ಎಂದು ಮರು ನಾಮಕರಣ ಮಾಡಿದ್ದಾರೆ. 20 ಪುತ್ರರು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸೇರಿ 70 ಸದಸ್ಯರ ತುಂಬು ಕುಟುಂಬದೊಂದಿಗೆ ಅಜ್ಜಿ ಮರುನಾಮಕರಣ ಮಾಡಿಕೊಂಡಿದ್ದಾರೆ.
Advertisement
Advertisement