ಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಚಿತ್ರಾನ್ನ ತಿನ್ನಿಸಿ 10,000 ನಗದು, ಮೊಬೈಲ್ ದೋಚಿ ಪರಾರಿ!

Public TV
1 Min Read
OLD WOMEN

ಚಾಮರಾಜನಗರ: ವೃದ್ಧೆ ಒಬ್ಬರಿಗೆ ಚಿತ್ರಾನ್ನ ತಿನ್ನಿಸಿ 10 ಸಾವಿರ ರೂ. ಹಾಗೂ ಮೊಬೈಲ್ ದೋಚಿ ಪರಾರಿಯಾದ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Mahadeshwara Hill) ನಡೆದಿದೆ.

ಬೆಂಗಳೂರು (Bengaluru) ಮೂಲದ ರತ್ಮಮ್ಮ (70) ವಂಚನೆಗೊಳಗಾದ ವೃದ್ಧೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ರತ್ನಮ್ಮ ದೇವರ ದರ್ಶನ ಮುಗಿಸಿ ರಂಗಮಂದಿರದಲ್ಲಿ ಮಲಗಿದ್ದರು. ಈ ವೇಳೆ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಬಂದು ಮಾತಾಡಿಸಿದ್ದಾರೆ. ಬಳಿಕ ಪರಿಚಯ ಮಾಡಿಕೊಂಡು ಜೊತೆಗೆ ಮಲಗಿದ್ದಾರೆ. ಬಳಿಕ ತಿಂಡಿಯಲ್ಲಿ ಮತ್ತು ಬರಿಸುವ ಔಷಧಿ ಬೆರಸಿ ಕೊಟ್ಟು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ದಂಪತಿಗೆ ಪ್ರಧಾನಿ ಆಹ್ವಾನ

ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವೃದ್ಧೆ ಮಾತಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: NCERT ಪಠ್ಯಕ್ರಮ ನಿರ್ಧಾರ ಮಂಡಳಿಯಲ್ಲಿ ಸುಧಾಮೂರ್ತಿಗೆ ಸ್ಥಾನ

Web Stories

Share This Article