ಸಿಡ್ನಿ: ಚುನಾವಣಾ ಫಲಿತಾಂಶಗಳು ಅವರ ಇಚ್ಛೆಯಂತೆ ಬಾರದೇ ಇದ್ದಾಗ ಜಾರ್ಜ್ ಸೊರಸ್‌ನಂತಹ (George Soros) ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಪ್ರಾರಂಭಿಸುತ್ತಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಕಿಡಿಕಾರಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರೈಸಿನಾ@ಸಿಡ್ನಿ ಕಾರ್ಯಕ್ರಮದಲ್ಲಿ ಜೈಶಂಕರ್ ಅವರು ಸೊರಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
#WATCH | Mr Soros is an old, rich opinionated person sitting in New York who still thinks that his views should determine how the entire world works…such people actually invest resources in shaping narratives: EAM Dr S Jaishankar pic.twitter.com/k99Hzf3mGK
— ANI (@ANI) February 18, 2023
Advertisement
ಹಿರಿಯ, ಶ್ರೀಮಂತ ಮತ್ತು ಅಪಾಯಕಾರಿ ಎಂದು ಸೋರಸ್ ಅವರನ್ನು ಜೈಶಂಕರ್ ಬಣ್ಣಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳಲು ಭಾರತ (India) ಮುಂದಾಗಿದೆ ಎಂದು ಆರೋಪಿಸಿದ್ದರು. ಆದರೆ ಇದು ಸಂಭವಿಸಿರಲಿಲ್ಲ. ಇದೊಂದು ಹಾಸ್ಯಾಸ್ಪದ ಸಲಹೆಯಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?
Advertisement
ನ್ಯೂಯಾರ್ಕ್‌ನಲ್ಲಿ ಕುಳಿತಿರುವ ಹಳೆಯ, ಶ್ರೀಮಂತ ವ್ಯಕ್ತಿ ತನ್ನ ದೃಷ್ಟಿಕೋನದಲ್ಲೇ ಇಡೀ ಜಗತ್ತು ಕಾರ್ಯನಿರ್ವಹಿಸಬೇಕೆಂದು ಭಾವಿಸುತ್ತಾರೆ. ಈ ಅಪಾಯಕಾರಿ ವ್ಯಕ್ತಿಗಳು ಸಂಪನ್ಮೂಲಗಳನ್ನು ಹೂಡಿಕೆ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.
Advertisement
ಸೊರಸ್ ಅವರಂತಹ ಜನರು ತಾವು ನೋಡಲು ಬಯಸುವ ವ್ಯಕ್ತಿ ಗೆದ್ದರೆ ಚುನಾವಣೆ ಒಳ್ಳೆಯದು ಎಂದು ಭಾವಿಸುತ್ತಾರೆ ಮತ್ತು ಚುನಾವಣೆಯು ವಿಭಿನ್ನ ಫಲಿತಾಂಶವನ್ನು ನೀಡಿದರೆ ಅವರು ಅದನ್ನು ದೋಷಪೂರಿತ ಪ್ರಜಾಪ್ರಭುತ್ವ ಎಂದು ಹೇಳುತ್ತಾರೆ ಎಂದು ದೂರಿದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k