ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ, ಉದ್ಯಮಿ ಗೌತಮ್ ಅದಾನಿ ಕುರಿತಾದ ಹಿಂಡನ್‍ಬರ್ಗ್ (Hindenburg) ಕುರಿತಾದ ವರದಿ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕೋಟ್ಯಧಿಪತಿ ಜಾರ್ಜ್ ಸೊರಸ್ (George Soros) ಅವರನ್ನು ಕೇಂದ್ರ ಸರ್ಕಾರ ಇಂದು ತರಾಟೆಗೆ ತೆಗೆದುಕೊಂಡಿದೆ.
Advertisement
ಜಾರ್ಜ್ ಸೊರಸ್ ಮ್ಯೂನಿಚ್ ಸೆಕ್ಯುರಿಟಿ ಕಾನ್ಫ್‍ರೆನ್ಸ್‍ನಲ್ಲಿ ಸೊರೊಸ್ ಅದಾನಿ ಕಂಪನಿಗಳ ವಂಚನೆ ಹಾಗೂ ಈ ಕುರಿತು ಪ್ರಧಾನಿ ಮೋದಿಯವರ ಮೌನದ ಕುರಿತು ಅವರು ಧ್ವನಿ ಎತ್ತಿದ್ದರು. ಮೋದಿಯವರ ಅಡಳಿತದ ಭಾರತವು ಕೆಳಮಟ್ಟಕ್ಕೆ ಕುಸಿಯುತ್ತಿದೆ. ಭಾರತ ಕ್ವಾಡ್ ದೇಶವಾಗಿದ್ದರೂ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಭಾರತದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ನಾನು ಬಯಸುತ್ತೇನೆ ಎಂದು ಸೊರಸ್ ಅಭಿಪ್ರಾಯ ಪಟ್ಟಿದ್ದರು. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಭಾರತವನ್ನು ಸಹಿಸಲಾಗದೆ ವಿದೇಶಿ ಶಕ್ತಿಗಳು ದಾಳಿ ನಡೆಸುತ್ತಿವೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದಿದ್ದಾರೆ.
Advertisement
ಯಾರು ಈ ಸೊರಸ್?
92 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.
Advertisement
ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.
ಸೊರಸ್ 8.5 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು
ಶೀತಲ ಸಮರದ ಅಂತ್ಯದ ವೇಳೆಗೆ ಜೆಕಾಸ್ಲೋವಾಕಿಯ, ಪೋಲೆಂಡ್, ರಷ್ಯಾ ಮತ್ತು ಯುಗೊಸ್ಲಾವಿಯಾದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಒಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವ ಅವರು ಬರಾಕ್ ಒಬಾಮ (Barack Obama), ಹಿಲರಿ ಕ್ಲಿಂಟನ್ ಮತ್ತು ಜೋ ಬೈಡನ್ (Joe Biden) ಅವರನ್ನು ಬೆಂಬಲಿಸಿದ್ದರು. ಹಾಗೆ ಚೀನಾ ಅಧ್ಯಕ್ಷ ಜಿನ್‍ಪಿಂಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಟರ್ಕಿ (Turkey) ಅಧ್ಯಕ್ಷ ಎರ್ಡೋಗನ್ ಅವರನ್ನು ವಿರೋಧಿಸಿದ್ದರು.
ಕಳೆದ ತಿಂಗಳು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‍ಬರ್ಗ್ ಸಂಸ್ಥೆ ಅದಾನಿ ಕಂಪನಿಯ ವಂಚನೆ ಕುರಿತಾದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದಾದ ನಂತರ ಅದಾನಿ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು. ಆದರೆ ಹಿಂಡನ್‍ಬರ್ಗ್ ವರದಿಯನ್ನು ಅದಾನಿ ಸಂಸ್ಥೆ ಅಲ್ಲಗಳೆದು ದೀರ್ಘವಾದ ಉತ್ತರ ನೀಡಿತ್ತು.
ಸೊರಸ್ ಮೋದಿ ವಿರುದ್ಧ ಟೀಕೆ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಇದನ್ನೂ ಓದಿ: ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k