ಬೆಂಗಳೂರು: ವೃದ್ಧ ದಂಪತಿಯನ್ನು ಬರ್ಬರವಾಗಿ ದುರ್ಷ್ಕಮಿಗಳು ಮಾರಕಾಸ್ತ್ರಗಳಿಂದ ಕೂಲೆ ಮಾಡಿರುವ ಘಟನೆ ನಗರದ ಎಚ್‍ಎಎಲ್‍ನ ಹೇಮಂತ್ ನಗರದಲ್ಲಿ ನಡೆದಿದೆ.
ಗೋವಿಂದನ್ ಹಾಗೂ ಸರೋಜಾ ದಂಪತಿ ಕೂಲೆಗೀಡಾಡ ದುರ್ದೈವಿಗಳು. ಎರಡು ದಿನಗಳ ಹಿಂದೆಯೇ ದಂಪತಿಯನ್ನ ಕೂಲೆ ಮಾಡಿ ದುರ್ಷ್ಕಮಿಗಳು ಪರಾರಿಯಾಗಿದ್ದಾರೆ. ಆದರೆ ಮಂಗಳವಾರ ಸಂಜೆ ಮನೆಯಿಂದ ದುರ್ವಾಸನೆ ಬರತೂಡಗಿದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಎಚ್‍ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ದಂಪತಿಯ ಕೈ-ಕಾಲುಗಳನ್ನು ಕಟ್ಟಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಬೆಲೆಬಾಳುವ ಆಭರಣಗಳನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಗೋವಿಂದನ್ ದಂಪತಿಗೆ ಪರಿಚಯವಿರುವವರೇ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
Advertisement
ಸಾಕ್ಷಿ ನಾಶಕ್ಕೆ ಸಿಲಿಂಡರ್ ಬ್ಲಸ್ಟ್ ಗೆ ಯತ್ನ: ಹಂತಕರು ಈ ಕೃತ್ಯವೆಸಗಿದ ಬಳಿಕ ಸಾಕ್ಷಿ ನಾಶ ಮಾಡಲು ಸಿಲಿಂಡರ್ ಬ್ಲಾಸ್ಟ್ ಮಾಡೋಕೆ ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಗ್ಯಾಸ್ ಲೀಕ್ ಮಾಡಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement
ಬಿಇಎಲ್‍ನಲ್ಲಿ ನೌಕರರಾಗಿದ್ದ ಗೋವಿಂದನ್ ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದು, ಸ್ವಂತ ಮಕ್ಕಳ ಮೇಲೆ ಅವಲಂಬಿತವಾಗದೇ ತನ್ನ ಪತ್ನಿಯೊಂದಿಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಈ ಭಾನುವಾರ ಅದೇ ಏರಿಯಾದಲ್ಲಿರುವ ತಮ್ಮ ಮಗಳು ಉಷಾಗೆ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬರುತ್ತೀವಿ ಎಂದು ಹೇಳಿ ಹೋಗಿದ್ದರು. ಹೀಗಾಗಿ ಪ್ರತಿದಿನ ಅಪ್ಪ-ಅಮ್ಮನ ಮನೆಗೆ ತೆರಳಿ ಅವರ ಕುಷಲೋಪರಿಯನ್ನು ವಿಚಾರಿಸುತ್ತಿದ್ದ ಉಷಾ, ಕಳೆದ ಎರಡು ದಿನ ಆ ಕಡೆ ಹೋಗಿಯೇ ಇರಲಿಲ್ಲ. ಇಂದು ಪೊಲೀಸರು ಬಂದಾಗಲೇ ಮಗಳು ಉಷಾಗೂ ತನ್ನ ತಂದೆ-ತಾಯಿ ಕೊಲೆಯಾಗಿರುವುದು ಗತ್ತಾಗಿದೆ.
ನಗರ ಪೊಲೀಸ್ ಆಯುಕ್ತರಾದ ಟಿ.ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಕೂಡ ಸ್ಥಳ ಪರಿಶೀಲನೆ ನಡೆಸಿ, ಕೆಲವು ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ. ಗೋವಿಂದನ್ ಮತ್ತು ಸರೋಜಾರನ್ನು ಮೂರ್ನಾಲ್ಕು ದಿನಗಳ ಹಿಂದೆಯೇ ಹತ್ಯೆಗೈಯಲಾಗಿದೆ.
ಈ ದಂಪತಿ ಒದ್ದಾಡದಂತೆ ತಡೆಯಲು ಹಂತಕರು ಮೊದಲು ಅವರ ಮುಖಕ್ಕೆ ಮತ್ತು ಕೈ-ಕಾಲುಗಳ ಬಟ್ಟೆ ಕಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಬಳಿಕ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.