– 60 ವರ್ಷ ಮೇಲ್ಪಟ್ಟವರೇ ಇವ್ರ ಮೇನ್ ಟಾರ್ಗೆಟ್..!
ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಮೋಸ ಮಾಡುವವರಿಗೇನು ಕಡಿಮೆ ಇಲ್ಲ. ಅದರಲ್ಲೂ ರಾಜಕಾರಣಿಗಳ ಹೆಸರು ಹೇಳಿ ಯಾಮಾರಿಸುವವರೇ ಹೆಚ್ಚು. ಅದರೆ ನಮ್ಮ ದೇಶದ ಪ್ರಧಾನಿ ಹೆಸರಲ್ಲಿ ಕೂಡ ಹುಟ್ಟಿಕೊಂಡಿದೆ ದೂಡ್ಡ ಜಾಲ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮೋಸ ಮಾಡುವ ಜಾಲ ಹುಟ್ಟಿಕೊಂಡಿದೆ. ಈ ಜಾಲದ ಪ್ರಮುಖ ಟಾರ್ಗೆಟ್ 60ವರ್ಷ ಮೇಲ್ಪಟ್ಟ ದಂಪತಿಗಳು.
ಬೆಂಗಳೂರಿನ ವಿಜಯನಗರದ ಹೋಸಹಳ್ಳಿಯಲ್ಲಿ ನಾಗೇಶ್ವರ ರಾವ್ ದಂಪತಿಗಳಿಗೆ ಇಬ್ಬರು ಆಗುಂತಕರು ಕೆಇಬಿ ಇಂಜನಿಯರ್ಸ್ ಅಂತಾ ಹೇಳಿಕೂಂಡು ಮನೆಗೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸೀನಿಯರ್ ಸಿಟಿಜನ್‍ಗಳಿಗೆ ಫ್ರೀಯಾಗಿ ಲೈಟ್‍ಗಳನ್ನು ಕೊಡುತ್ತಿದ್ದಾರೆ ಅಂತಾ ಹೇಳಿದ್ದಾರೆ. ಮೊದಲಿಗೆ 90 ಲೈಟ್‍ಗಳನ್ನು ಕೊಟ್ಟಿದ್ದಾರೆ. ನಂತರ 9000 ರೂ. ಕೊಡಿ ಸ್ಕ್ಯಾನ್ ಮಾಡಿ ವಾಪಾಸ್ ಕೊಡತ್ತೀವಿ. ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಹೇಳಿ ದುಡ್ಡು ತೆಗೆದುಕೊಂಡು ಬೈಕ್ ಹತ್ತಿ ಓಡಿ ಹೋಗುತ್ತಾರೆ.
Advertisement
ಮೋಸ ಮಾಡಿ ಓಡಿ ಹೋಗುತ್ತಿರುವ ದೃಶಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರದ ಸುತ್ತಮುತ್ತ ಇತಂಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇಲ್ಲಿನ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು. ಭಯದಲ್ಲಿ ಬದುಕುವಂತಾಗಿದೆ. ವಿಜಯನಗರ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೋಸಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.