ಮಂಗಳೂರು: ಗುಡ್ಡದಿಂದ ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ಯಾರೊಬ್ಬರೂ ಮುಟ್ಟದೇ ಸಂಜೆಯಾದ್ರೂ ಅನಾಥವಾಗೇ ಬಿದ್ದಿದ್ದ ಅಮಾನವೀಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿಯಲ್ಲಿ ನಡೆದಿದೆ. 80 ವರ್ಷದ ತರೀಕೆರೆ ನಿವಾಸಿ ಅಸಲಪ್ಪ ಮೃತ ವೃದ್ಧ.
ಗ್ರಾಮದಲ್ಲಿ ದೈವದ ನರ್ತನ ಸೇವೆಯಿದ್ದು ಸೂತಕ ಆವರಿಸುವುದು ಅಂತ ಮನೆಯಲ್ಲಿಯೇ ಗ್ರಾಮಸ್ಥರು ಉಳಿದ್ರು. ಬಳಿಕ ಘಟನೆಯ ಮಾಹಿತಿ ತಿಳಿದ ಕಡಬ ಠಾಣಾ ಪೊಲೀಸರು ಶವವನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
ಪಿಎಸ್‍ಐ ಪ್ರಕಾಶ್, ಎಎಸ್‍ಐ ರವಿ, ಹೋಮ್ ಗಾರ್ಡ್ ಸಂದೇಶ್ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದರು.