ಮಾಸ್ಕೋ: ಪ್ರಮುಖ ಜಾಗತಿಕ ವ್ಯಾಪಾರ ಸಂಸ್ಥೆಗಳು ಮೇ 15ರಿಂದ ರಷ್ಯಾದ ರಾಜ್ಯ ನಿಯಂತ್ರಿತ ತೈಲ ಕಂಪನಿಗಳಿಂದ ಕಚ್ಚಾತೈಲ ಖರೀದಿಯನ್ನು ಕಡಿತಗೊಳಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
Advertisement
ಉಕ್ರೇನ್ ಮೇಲಿನ ಆಕ್ರಮಣದ ನಂತರವೂ ಯೂರೋಪ್ ಒಕ್ಕೂಟಗಳು ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸಿಲ್ಲ. ಏಕೆಂದರೆ ಜರ್ಮನಿಯಂತಹ ಕೆಲ ದೇಶಗಳೂ ರಷ್ಯಾದ ತೈಲ ಆಮದಿನ ಮೇಲೆಯೇ ಅವಲಂಬಿತವಾಗಿವೆ. ಪರ್ಯಾಯ ಮಾರ್ಗ ಕಂಡುಕೊಳ್ಳಲು ಮೂಲ ಸೌಕರ್ಯ ಹೊಂದಿಲ್ಲದೇ ಇರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್?
Advertisement
ಆದಾಗ್ಯೂ, ತೈಲ ಮಾರಾಟ ಕಂಪನಿಗಳು ರಷ್ಯಾದ ಎನರ್ಜಿ ಗ್ರೂಪ್ ರಾಸ್ನೆಫ್ಟ್ನಿಂದ ಖರೀದಿಗಳನ್ನು ಸ್ಥಗಿತಗೊಳಿಸುತ್ತಿವೆ. ಏಕೆಂದರೆ ಅವರು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ರಷ್ಯಾದ ಪ್ರವೇಶವನ್ನು ಮಿತಿಗೊಳಿಸುವ ಉದ್ದೇಶದಿಂದ ಕಡಿತಗೊಳಿಸಲಾಗುತ್ತಿದೆ. ಅದಕ್ಕಾಗಿ ಯೂರೋಪ್‌ನ ಇಂಧನ ಭದ್ರತೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿವೆ.
Advertisement
Advertisement
ಯೂರೋಪ್ ಒಕ್ಕೂಟಗಳೂ ಮೇ 15ರಿಂದ ಕೆಲವು ನಿರ್ಬಂಧಗಳನ್ನು ಅನುಸರಿಸಲಿದ್ದು, ತೈಲ ಆಮದನ್ನು ಖಡಿತಗೊಳಿಸಲಿವೆ. ಜೊತೆಗೆ ರಷ್ಯಾದ ಪ್ರಮುಖ ತೈಲ ಖರೀದಿದಾರರಾದ ಟ್ರಾಫಿಗುರಾ ರಾಯಿಟರ್ಸ್ ಸಹ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಹಾಗಾಗಿ ವಹಿವಾಟನ್ನು ಮೇ 15 ರಿಂದ ಇನ್ನಷ್ಟು ಕಡಿತಗೊಳಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್
ಏಪ್ರಿಲ್‌ನಲ್ಲಿ ರಷ್ಯಾದ ರೋಸ್‌ನೆಫ್ಟ್ ಮತ್ತು ಗಾಜ್‌ಪ್ರೊಮ್‌ನೆಫ್ಟ್ನ ಪಶ್ಚಿಮ ಬಂದರುಗಳಿಂದ ಕಚ್ಚಾ ತೈಲ ರಫ್ತು ಶೇ.40 ರಷ್ಟು ಹೆಚ್ಚಾಗಲಿದೆ. ಹಾಗಾಗಿ, ನಿರ್ಬಂಧಗಳನ್ನು ವಿಧಿಸುವ ಮೂಲಕ ಆಮದು ಕಡಿತಗೊಳಿಸಲಾಗುತ್ತದೆ ಎಂದು ಇಂಟರ್‌ನ್ಯಾಷನಲ್ ಎನರ್ಜಿ ಸಂಸ್ಥೆಯೊಂದು ಹೇಳಿದೆ.