LatestMain PostSmartphonesTech

ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್

ವಾಷಿಂಗ್ಟನ್: ಮೆಟಾ ಮಾಲೀಕತ್ವದ ವಾಟ್ಸಪ್ ಹೊಸ ಫೀಚರ್‌ಗಳನ್ನು ಬಿಡುಡೆ ಮಾಡಲಿದೆ. ಕಮ್ಯೂನಿಟಿ ಹೆಸರಿನ ಫೀಚರ್‌ನಲ್ಲಿ ಒಟ್ಟು 4 ಸೇವೆಗಳನ್ನು ವಾಟ್ಸಪ್ ಶೀಘ್ರವೇ ಬಳಕೆದಾರರಿಗೆ ಲಭ್ಯವಾಗಲಿದೆ.

ಕಮ್ಯೂನಿಟಿ ಫೀಚರ್ ಪ್ರಕಾರ ವಾಟ್ಸಪ್‌ನ ಪ್ರತ್ಯೇಕ ಗುಂಪುಗಳನ್ನು ಒಟ್ಟು ಮಾಡಿ ಸಂವಹನ ನಡೆಸಲು ಅನುಕೂಲವಾಗಲಿದೆ. ವಾಟ್ಸಪ್‌ನ ಈ ಹೊಸ ಫೀಚರ್‌ನಿಂದ 4 ವಿವಿಧ ಸಹಾಯಗಳು ಆಗಲಿದೆ. ಗ್ರೂಪ್ ಅಡ್ಮಿನ್‌ಗೆ ಬೇಡದ ಮೆಸೆಜ್‌ಗಳನ್ನು ಅಳಿಸಲು ಸಾಧ್ಯವಾಗುವ ಫೀಚರ್, 32 ಬಳಕೆದಾರರನ್ನು ಒಳಗೊಂಡ ಧ್ವನಿ ಕರೆ, ಸಂದೇಶ ಪ್ರತಿಕ್ರಿಯೆ ಹಾಗೂ ದೊಡ್ಡ ಫೈಲ್ ಹಂಚಿಕೆಯ ಫೀಚರ್‌ಗಳನ್ನು ಪರಿಚಯಿಸಿದೆ.

ವಾಟ್ಸಪ್ ಈ ಫೀಚರ್‌ಗಳನ್ನು ಆನ್‌ಲೈನ್ ತರಗತಿ, ಸ್ಥಳೀಯ ಕ್ಲಬ್, ಸಂಸ್ಥೆಗಳಿಗೆ ಒಂದೇ ಬಾರಿಗೆ ಸಂವಹನ ನಡೆಸಲು ಸಹಾಯವಾಗುವ ನಿಟ್ಟಿನಲ್ಲಿ ಮಾಡಿದೆ. ಈ ನಾಲ್ಕು ಫೀಚರ್‌ಗಳು ಹೇಗೆ ಬಳಕೆದಾರರಿಗೆ ಸಹಾಯವಾಗಲಿದೆ ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: 10 ಕೋಟಿ ಭಾರತೀಯ ಬಳಕೆದಾರರಿಗೆ ಯುಪಿಐ ಸೇವೆ ನೀಡಲಿದೆ ವಾಟ್ಸಪ್

ಪ್ರತಿಕ್ರಿಯೆ ಫೀಚರ್:
ಫೇಸ್‌ಬುಕ್‌ನಲ್ಲಿ ಇದ್ದಂತೆ ಇದೀಗ ವಾಟ್ಸಪ್‌ನಲ್ಲೂ ಕ್ವಿಕ್ ರಿಯಾಕ್ಷನ್ ಫೀಚರ್ ಇರಲಿದೆ. ಇದು ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿದವರಿಗೆ ತ್ವರಿತವಾಗಿ ಇಮೋಜಿ ಪ್ರತಿಕ್ರಿಯೆ ನೀಡಲು ಸಹಾಯವಾಗಲಿದೆ. ಈ ಫೀಚರ್‌ನಿಂದ ಇಮೋಜಿಗಳನ್ನು ಹುಡುಕುವ ಅಗತ್ಯ ಬೀಳುವುದಿಲ್ಲ. ಬದಲಿಗೆ ತಕ್ಷಣವೇ ಉತ್ತರಿಸಲು ಸಹಾಯವಾಗಲಿದೆ.

ಅಡ್ಮಿನ್‌ಗೆ ಸಂದೇಶ ಅಳಿಸುವ ಫೀಚರ್:
ಇನ್ನು ಮುಂದೆ ಗ್ರೂಪ್ ಅಡ್ಮಿನ್ ಗುಂಪಿನ ಇತರ ಸದಸ್ಯರು ಕಳುಹಿಸುವ ಸಂದೇಶಗಳನ್ನು ಅಳಿಸಲು ಸಾಧ್ಯವಿದೆ. ಈ ಫೀಚರ್‌ನಿಂದ ಬೇಡದ ಸಂದೇಶಗಳನ್ನು ಗ್ರೂಪ್ ಅಡ್ಮಿನ್ ಸುಲಭವಾಗಿ ಅಳಿಸಲು ಸಾಧ್ಯವಾಗಲಿದೆ.

ಫೈಲ್ ಹಂಚಿಕೆ ಫೀಚರ್:
ಈ ಫೀಚರ್‌ನಿಂದ ವಾಟ್ಸಪ್ 2 ಗಿಗಾಬೈಟ್ ವರೆಗಿನ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ. ಈ ಫೀಚರ್‌ನಿಂದ ಬಳಕೆದಾರರು ಯೋಜನೆಗಳಲ್ಲಿ ಸುಲಭವಾಗಿ ಸಹಕರಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

whatsapp

ದೊಡ್ಡಮಟ್ಟದ ವಾಯ್ಸ್ ಕಾಲ್:
ಈ ಹಿಂದೆ ವಾಟ್ಸಪ್‌ನಲ್ಲಿ ಕೇವಲ 8 ಜನರು ಮಾತ್ರವೇ ಒಂದು ಬಾರಿ ಧ್ವನಿ ಕರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿತ್ತು. ಆದರೆ ವಾಟ್ಸಪ್ ಈ ಸಂಖ್ಯೆಯನ್ನು ಹೆಚ್ಚಿಸಿದೆ. ಇದೀಗ ವಾಟ್ಸಪ್ ಧ್ವನಿ ಕರೆಯಲ್ಲಿ 32 ಜನರು ಒಂದೇ ಬಾರಿ ಸೇರಲು ಸಾಧ್ಯವಾಗಲಿದೆ.

ಈ ಫೀಚರ್‌ಗಳು ಮುಂದಿನ ವಾರಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ. ಇದೀಗ ಈ ಫೀಚರ್‌ಗಳನ್ನು ಬೀಟಾ ಬಳಕೆದಾರರಿಗೆ ಪರೀಕ್ಷಿಸಲು ಲಭ್ಯವಿದ್ದು, ಎಲ್ಲಾ ಬಳಕೆದಾರರು ಶೀಘ್ರದಲ್ಲೇ ಲಭ್ಯವಾಗಲಿದೆ.

Leave a Reply

Your email address will not be published.

Back to top button