ನವದೆಹಲಿ: ಭಾರತದ 22 ಸಿಬ್ಬಂದಿಗಳು ಇದ್ದ ಇಂಧನ ನೌಕೆಯೊಂದು ಪಶ್ಚಿಮ ಆಫ್ರಿಕಾದ ಬೆನಿನ್ ಕರಾವಳಿಯಲ್ಲಿ ನಾಪತ್ತೆಯಾಗಿರೋ ಕುರಿತು ವರದಿಯಾಗಿದೆ.
ಇಂಧನ ನೌಕೆ ಶೋಧಕಾರ್ಯಕ್ಕೆ ಸಹಾಯ ಮಾಡುವಂತೆ ಅದರ ಮಾಲೀಕರು ಮುಂಬೈನ ಹಡಗು ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ. ಕಾಣೆಯಾದ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿಗೆ ಸೇರಿದ್ದು, ಅದರಲ್ಲಿದ್ದ 22 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ.
Advertisement
ಕಾಣೆಯಾದವರನ್ನು ಪತ್ತೆ ಮಾಡಲು ಭಾರತೀಯ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದಿದ್ದು, ಪತ್ತೆ ಕಾರ್ಯಾಚರಣೆ ನಡೆಸಲು ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ನೌಕೆಯಲ್ಲಿದ್ದ ಭಾರತೀಯ ಪ್ರಜೆಗಳ ಸಂಬಂಧಿಗಳಿಗೆ ಮಾಹಿತಿ ನೀಡಲು ವಿದೇಶಾಂಗ ಇಲಾಖೆ 24 ಗಂಟೆಗಳು ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಆರಂಭಿಸಿದೆ. ಮೂಲಗಳ ಪ್ರಕಾರ ಹಡಗು 13,500 ಟನ್ ಗ್ಯಾಸೋಲಿನ್ ಹೊತ್ತು ಸಾಗಿತ್ತು ಎಂದು ತಿಳಿದುಬಂದಿದೆ. ಈ ನೌಕೆಯನ್ನು ಅಪಹರಣ ಮಾಡಿರುವ ಸಾಧ್ಯತೆಗಳ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ.
Advertisement
ನೈಜಿರಿಯನ್ ಅಧಿಕಾರಿಗಳು ನೌಕೆಯ ಪತ್ತೆ ಕಾರ್ಯಕ್ಕೆ ತನ್ನ ಎಲ್ಲಾ ಹಡಗುಗಳಿಗೆ ಮಾಹಿತಿ ನೀಡಿ ಎಚ್ಚರಿಕೆ ನೀಡಿದೆ. ಅಲ್ಲದೇ ಈ ನೌಕೆಯ ಮಾಹಿತಿ ಲಭಿಸಿದರೆ ಇಂಟರ್ ನ್ಯಾಷನಲ್ ಮೆರಿಟೈಮ್ ವಿಭಾಗಕ್ಕೆ ತಿಳಿಸಲು ಸೂಚಿಸಿದೆ. ಆದರೆ ಪ್ರಸ್ತುತ ನೌಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗಿದೆ.
Our Mission in Abuja (Nigeria) is in touch with the authorities in Benin and Nigeria for their help in locating the ship and is constantly monitoring the situation. A 24-hour helpline number set up by the Embassy for information on those missing is +234-9070343860
— Arindam Bagchi (@MEAIndia) February 3, 2018
We regret that contact has been lost with the AE-managed MT Marine Express while at Cotonou, Benin. Last contact was at 03:30 UTC, Feb 1. Authorities have been alerted and are responding. Our top priority is the safety of the crew, whose families have been contacted. Updates TBA.
— Anglo-Eastern (@angloeasterngrp) February 2, 2018