ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಸೋಯಾಬಿನ್ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸೋಯಾಬಿನ್ ಎಣ್ಣೆ ತುಂದಿದ್ದ ಟ್ಯಾಂಕರ್ ಮಹಾರಾಷ್ಟ್ರದ ಲಾತೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿತ್ತು. ಈ ವೇಳೆ ಚಡಚಣ ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಟ್ಯಾಂಕರ್ ಬಿದ್ದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿಯಿಂದ ಅಪಾರ ಪ್ರಮಾಣದ ಸೋಯಾಬಿನ್ ಎಣ್ಣೆ ಸೋರಿಕೆಯಾಗಿದೆ.
ಹೀಗೆ ಸೋರುತ್ತಿದ್ದ ಎಣ್ಣೆಯನ್ನು ಬಾಟಲಿ, ಬಿಂದಿಗೆ ಹಾಗೂ ಬಕೆಟ್‍ಗಳಲ್ಲಿ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ಆದ್ರೆ ಯಾರೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದ ಚಾಲಕನತ್ತ ಗಮನಹರಿಸದೇ ಮಾನವೀಯತೆ ಮರೆತಿದ್ದಾರೆ.
ಎಣ್ಣೆ ಟ್ಯಾಂಕರ್ ನಗರದ ವಿದ್ಯಾಶ್ರೀ ಟ್ರೇಡರ್ಸ್ ಆಯಿಲ್ ಮಿಲ್‍ಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv