– ಗೃಹ ಬಳಕೆದಾರರಿಗೆ ರಿಲೀಫ್
ನವದೆಹಲಿ: ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್ ಮಾಲೀಕರು ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬೆಲೆ ಏರಿಕೆ ಶಾಕ್ ಕೊಟ್ಟಿವೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG Cylinders) ಮೇಲಿನ ದರವನ್ನು ಹೆಚ್ಚಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮಾಹಿತಿಯ ಪ್ರಕಾರ, ಕಮರ್ಷಿಯಲ್ ಸಿಲಿಂಡರ್ ದರದಲ್ಲಿ 9.50 ರೂಪಾಯಿವರೆಗೆ ಏರಿಕೆ (LPG Price Hike) ಮಾಡಲಾಗಿದೆ. ಆದರೆ ಗೃಹ ಬಳಕೆದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಸದ್ಯ 14 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ, ಜೊತೆಗೆ 5 ಕೆಜಿ, 10 ಕೆಜಿ ಸಿಲಿಂಡರ್ ಬೆಲೆಯಲ್ಲೂ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.

ಯಾವ ಸಿಲಿಂಡರ್ ಬೆಲೆ ಹೇಗಿದೆ?
* 5 ಕೆಜಿ ಸಾಮಾನ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 349.50 ರೂ. ಆಗಿಯೇ ಮುಂದುವರಿದಿದೆ.
* 5 ಕೆಜಿ XTRALITE ಸಿಲಿಂಡರ್ ದರ 339 ರೂ.ಗೆ ಸ್ಥಿರವಾಗಿದೆ.
* 5 ಕೆಜಿ ನಾನ್-ಡೊಮೆಸ್ಟಿಕ್ ಸಿಲಿಂಡರ್ ಬೆಲೆ ಮಾತ್ರ 762 ರಿಂದ 764 ರೂ.ವರೆಗೆ ಏರಿಕೆಯಾಗಿದೆ.
ಇಂದು ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ಹೇಗಿದೆ?
* ದೆಹಲಿ – 2,747.50 ರೂ.
* ನೋಯ್ಡಾ – 2,747.50 ರೂ.
* ಮುಂಬೈ- 2,701 ರೂ.
* ಕೋಲ್ಕತ್ತಾ – 2,982 ರೂ.
* ಚೆನ್ನೈ – 2,916.50 ರೂ.

ಪ್ರಮುಖ ನಗರಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ದರ ಇಂದು ಹೇಗಿದೆ?
* ದೆಹಲಿ – 942 ರೂ.
* ಮುಂಬೈ – 941.50 ರೂ.
* ಕೋಲ್ಕತ್ತಾ – 968 ರೂ.
* ಚೆನ್ನೈ – 957.50 ರೂ.
