ರಾಮನಗರ: ಸಚಿವ ಸಂಪುಟ ಉಪಸಮಿತಿ ಸದಸ್ಯರು ಬರ ಪರಿಶೀಲನೆ ಸಭೆ ನಡೆಸುತ್ತಿದ್ದರೆ ಇನ್ನೊಂದೆಡೆ ಸಭೆಯಲ್ಲಿ ಹಾಜರಾಗಿದ್ದ ಜಿಲ್ಲೆಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಾರೆ.
ಗುರುವಾರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಸಂಪುಟ ಉಪಸಮಿತಿ ಸದಸ್ಯರು ಬರ ಪರಿಶಿಲನೆ ಸಭೆಯನ್ನು ಕರೆದಿದ್ದರು. ಈ ವೇಳೆ ಸಭೆಯಲ್ಲಿ ಹಾಜರಾಗಿದ್ದ ಅಧಿಕಾರಿಗಳು ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ತಮ್ಮ ತಮ್ಮ ಮೊಬೈಲ್ ಹಿಡಿದು ಕಾಲಹರಣ ಮಾಡ್ತಿದ್ದ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಸಭೆಯಲ್ಲಿ ಜಿಲ್ಲೆಯ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬೇಕು ಅಂತ ಯೋಚನೆ ಮಾಡುವುದನ್ನು ಬಿಟ್ಟು ಮೊಬೈಲ್ ಹಿಡಿದು ಆರಾಮಾಗಿ ಅಧಿಕಾರಿಗಳು ಸಭೆಗೆ ಕ್ಯಾರೇ ಅನ್ನದೆ ಕುಳಿತ್ತಿದ್ದರು.
ಜಿಲ್ಲೆಯಲ್ಲಿ ತಾಂಡವಾಡ್ತಿರುವ ಬರ ಪರಿಸ್ಥಿತಿಯ ಬಗ್ಗೆ ಉಪಸಂಪುಟ ಸಮಿತಿಯು ಪ್ರವಾಸ ನಡೆಸಿ ಅಧ್ಯಯನ ನಡೆಸಲು ಮುಂದಾಗಿದೆ. ಆದ್ರೆ ಜನಪ್ರತಿನಿಧಿಗಳಿಗೆ ಬರಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ಮಾತ್ರ ಫೇಸ್‍ಬುಕ್, ವಾಟ್ಸಾಪ್ ಡಿಪಿ ಬದಲಿಸುತ್ತ, ಬೇರೆಯವರ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತ ಕುಳಿತು ಕಾಲಹರಣ ಮಾಡಿದ್ದಾರೆ.
ಉನ್ನತ ಸ್ಥಾನದಲ್ಲಿದ್ದುಕೊಂಡು ಸಭೆ ನಡೆಯುವ ವೇಳೆಯೇ ಬೇಜವಾಬ್ದಾರಿ ಕೆಲಸ ಮಾಡಿರುವ ಇವರು ಆಡಳಿತ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv