ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಂಚಲನ ಮೂಡಿಸಿದಷ್ಟೇ ಬಾಕ್ಸ್ ಆಫೀಸಿನಲ್ಲೂ ಅದು ಸದ್ದು ಮಾಡಿತ್ತು. ಈ ಸಿನಿಮಾದ ಬಜೆಟ್ ಹೇಳಿದರೆ ನೀವು ನಂಬುವುದು ಅಸಾಧ್ಯ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೇ ತಮ್ಮ ವಿಕಿಪಿಡಿಯಾ ಪೇಜ್ ನಲ್ಲಿ ಬರೆದುಕೊಂಡಂತೆ, ಕೇವಲ 15 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ತಯಾರಿಸಿದ್ದಾರೆ. ಆದರೆ, ಅದು ಮಾಡಿದ ಗಳಿಕೆ ಮಾತ್ರ ಅಚ್ಚರಿ ಮೂಡಿಸುತ್ತಿದೆ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ
Advertisement
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಅವರ ಮೇಲೆ ಆದ ಹಿಂಸಾಚಾರದ ಕುರಿತಾಗಿ ಮಾಡಿರುವ ಸಿನಿಮಾವಿದು. ಹಾಗಾಗಿ ಹಿಂದೂಪರ ಸಂಘಟನೆಗಳು ಸೇರಿದಂತೆ ಹಲವರು ಈ ಸಿನಿಮಾದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರೆ, ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಿಸಿದವು. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ರಾಜ್ಯದ ನಾನಾ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಶಾಸಕರು ಖುದ್ದಾಗಿ ಈ ಸಿನಿಮಾದ ಪ್ರಚಾರದಲ್ಲಿ ಭಾಗಿಯಾದರು. ಪರಿಣಾಮ ಈವರೆಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಹರಿದು ಬಂದ ಮೊತ್ತ 331 ಕೋಟಿ. ಸ್ವತಃ ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ
Advertisement
Advertisement
ಅಂಥದ್ದೇನಿದೆ ಈ ಸಿನಿಮಾದಲ್ಲಿ ?
Advertisement
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ‘ಫೈಲ್’ ಇದಾಗಿದೆ. ಈ ‘ಫೈಲ್’ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.
ಸಾಮಾನ್ಯವಾಗಿ ಸಿನಿಮಾಗಳೆಂದರೆ ನಾಟಕೀಯ ನಿರೂಪಣೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಕಥೆಯ ಕುತೂಹಲವನ್ನು ಕಾಪಿಡಲು ಅಲ್ಲಲ್ಲಿ, ನಾಟಕೀಯ ತಿರುವುಗಳನ್ನೂ ನೀಡಲಾಗುತ್ತದೆ. ಪ್ರೇಕ್ಷಕನ ಆಸಕ್ತಿಯ ಅನುಗುಣವಾಗಿ ಪಾತ್ರಕ್ಕೆ ಹಿನ್ನೆಲೆ ಒದಗಿಸಲಾಗುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಅದ್ಯಾವ ಗೋಜಿಗೂ ನಿರ್ದೇಶಕರು ಹೋಗಿಲ್ಲ. ತಮ್ಮ ಸಂಶೋಧನೆಯಲ್ಲಿ ಕಂಡುಂಡ ಕಥನವನ್ನು ಹಾಗೆಯೇ ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಾಗಿ ಚಿತ್ರದ ತುಂಬಾ ಮನಸ್ಸಿಗೆ ಘಾಸಿಯಾಗುವಷ್ಟು ಕ್ರೌರ್ಯವೇ ತುಂಬಿದೆ. ಅದೊಂದು ಹತ್ಯಾಕಾಂಡದ ಕಥೆಯೇ ಆಗಿದ್ದರಿಂದ ತೆರೆಯ ಮೇಲೂ ಅದನ್ನೇ ಮೂಡಿಸಿದ್ದಾರೆ.