ಹುಬ್ಬಳ್ಳಿ: ಬಸ್ ನಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಬಂಗಾರದ ಆಭರಣವನ್ನು ಮಹಿಳೆಗೆ ಮರಳಿಸುವ ಮೂಲಕ ಹುಬ್ಬಳ್ಳಿಯ ಕೆಎಸ್‍ಆರ್ ಟಿಸಿ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಲಘಟಗಿ ಮೂಲದ ಅನಸೂಯಮ್ಮ ಕಲಘಟಗಿಯಿಂದ ವಿಜಯಪುರಕ್ಕೆ ಹೊರಟ್ಟಿದ್ದರು. ಹುಬ್ಬಳ್ಳಿಯಲ್ಲಿ ಬಸ್ ಇಳಿದು ವಿಜಯಪುರ ಬಸ್ ಹತ್ತಿದ್ದರು. ಆದರೆ ಈ ವೇಳೆ ತಾವು ತಂದಿದ್ದ ಚೀಲವನ್ನು ವಿಜಯಪುರ ಬಸ್ ನಲ್ಲಿ ಇಟ್ಟು ನೀರು ತರಲು ಹೋಗಿದ್ದಾರೆ. ಆದರೆ ಅವರು ಹಿಂದಿರುಗಿ ಬರುವಷ್ಟರಲ್ಲಿ ಬಸ್ ವಿಜಯಪುರದತ್ತ ಹೊರಟ್ಟಿತ್ತು. ಇದರಿಂದ ಮಹಿಳೆ ಕಂಗಾಲಾಗಿದ್ದಾರೆ.
Advertisement
ಮಹಿಳೆ ನಗರದ ಹಳೇ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಲಕ್ಷ್ಮಣ ಡೋಂಗರೆ ಅವರಿಗೆ ದೂರು ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು, ಒಂದು ಗಂಟೆಯೊಳಗೆ ಸುಮಾರು 2.50 ಲಕ್ಷ ಮೌಲ್ಯದ ಆಭರಣ ಹಾಗೂ ದಾಖಲೆಗಳಿದ್ದ ಲಗೇಜ್ ನ್ನು ಅನುಸೂಯಮ್ಮ ಅವರಿಗೆ ಮರಳಿ ತಲುಪಿಸಿದ್ದಾರೆ.
Advertisement