ಗಾಂಧಿನಗರ್: ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿಗೆ ಬಿಗ್ ಶಾಕ್ ತಗುಲಿದೆ.
ಬಿಜೆಪಿ ವಿರುದ್ಧ ಬರೋಬ್ಬರೀ 1 ಕೋಟಿ ರೂಪಾಯಿ ಆಮಿಷ ಒಡ್ಡಿದ ಗಂಭೀರ ಆರೋಪ ಕೇಳಿಬಂದಿದೆ. ಪ್ರಬಲ ಪಟೇಲ್ ಸಮುದಾಯದ ನಾಯಕರಿಬ್ಬರಿಗೆ ಬಿಜೆಪಿ ತಲಾ 1 ಕೋಟಿ ರೂಪಾಯಿ ಆಮಿಷ ಒಡ್ಡಿರುವ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.
Advertisement
Advertisement
ಬಿಜೆಪಿ ಸೇರಿಕೊಂಡರೆ 1 ಕೋಟಿ ರೂಪಾಯಿ ನೀಡುವುದಾಗಿ ಬಿಜೆಪಿ ಆಮಿಷ ಒಡ್ಡಿದೆ. ಈ ವಿಚಾರವನ್ನು ಮಾಧ್ಯಮಗೋಷ್ಠಿಯಲ್ಲಿ 500 ರೂಪಾಯಿಯ ನೋಟಿನ ಕಂತೆಗಳನ್ನು ಹಾರ್ದಿಕ್ ಪಟೇಲ್ ಪರಮಾಪ್ತ, ಪಟೇಲ್ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ನರೇಂದ್ರ ಪಟೇಲ್ ಪ್ರದರ್ಶಿಸಿದ್ದಾರೆ.
Advertisement
ಬಿಜೆಪಿ ಸೇರಿದ್ದ ಪಟೇಲ್ ಸಮುದಾಯದ ಮತ್ತೋರ್ವ ವರುಣ್ ಪಟೇಲ್ ಮೂಲಕ ತಮಗೆ ಬಿಜೆಪಿ ಆಮೀಷ ಒಡ್ಡಿದೆ. ಬಿಜೆಪಿ ಸೇರಿದರೆ 1 ಕೋಟಿ ರೂಪಾಯಿ ಸಿಗುತ್ತದೆ. ಮುಂಗಡವಾಗಿ ವರುಣ್ ಪಟೇಲ್ ನನಗೆ 10 ಲಕ್ಷ ರೂಪಾಯಿ ಕೊಟ್ಟಿದ್ದಾನೆ. ನಾಳೆ ಅವರು ನನಗೆ ಬಾಕಿಯಿರುವ 90 ಲಕ್ಷ ರೂಪಾಯಿ ಕೊಡುವರಿದ್ದಾರೆ. ಇಡೀ ಅರ್‍ಬಿಐಯನ್ನೂ ಕೊಟ್ಟರೂ ಬಿಜೆಪಿಯಿಂದ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ನರೇಂದ್ರ ಪಟೇಲ್ ಗುಡುಗಿದ್ದಾರೆ.
Advertisement