ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಪೋಸ್ಟರ್ ವಾರ್ ಮುಂದುವರಿದಿದ್ದು, ಕರೆಂಟ್ ಕಳ್ಳ ಖ್ಯಾತಿಯ ಹೆಚ್‌ಡಿಕೆ ನಿರ್ಮಾಣದ ʼಪೆನ್ ಡ್ರೈವ್ ಬ್ರದರ್ʼ ಚಿತ್ರ ಬಿಡುಗಡೆಯಾಲಿದೆ ಎಂಬ ಪೋಸ್ಟರ್ ಅಂಟಿಸಲಾಗಿದೆ.
ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ, ಶಿವಾನಂದ ಸರ್ಕಲ್ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಲಾಗಿದೆ. ಈ ಪೋಸ್ಟರ್ ಅನ್ನು ಅಂಟಿಸಿದವರು ಯಾರು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಪುಟ್ಗೋಸಿ ಕರೆಂಟ್‍ಗೆ ಸಿಎಂ, ಡಿಸಿಎಂ ಕಾಂಪಿಟೇಷನ್ ಮೇಲೆ ಅಧಿಕಾರಿಗಳನ್ನು ಕಳುಹಿಸಿದ್ರು: ಹೆಚ್‍ಡಿಕೆ
Advertisement
Advertisement
ಪೋಸ್ಟರ್‌ನಲ್ಲಿ ಏನಿದೆ?
ಕರೆಂಟ್ ಕಳ್ಳ ಖ್ಯಾತಿಯ ಹೆಚ್‌ಡಿಕೆ ನಿರ್ಮಾಣದ ಚಿತ್ರ ‘ಪೆನ್ ಡ್ರೈವ್ ಬ್ರದರ್’. ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ. ರಾಧಾ, ಕುಮಾರ, ಬ್ಲೂ ಬಾಯ್ಸ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ.
Advertisement
ಬರೀ ಟೀಸರ್‌ಗೆ ಇಷ್ಟೊಂದು ಟೆನ್ಶನ್ ಆದ್ರೆ ಹೇಗೆ? ಸಿನಿಮಾ ಇನ್ನೂ ಬಾಕಿಯಿದೆ. ಚಿತ್ರದ ನಿರ್ಮಾಣದ ವೆಚ್ಚ 68,000 ರೂಪಾಯಿ ದಂಡ ಎಂದು ವ್ಯಂಗ್ಯ ಮಾಡಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ಜೊತೆ ದತ್ತಮಾಲೆ ಧರಿಸಲಿದ್ದಾರೆ ಜೆಡಿಎಸ್ ಶಾಸಕರು
Advertisement
ವ್ಯಂಗ್ಯವಾಡಿದ್ದ ಕಾಂಗ್ರೆಸ್
ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ವ್ಯಂಗ್ಯ ಮಾಡಿತ್ತು. ಜೆಡಿಎಸ್ (JDS) ಕಚೇರಿ ಮುಂದೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆದಿರುವ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತರು ಲೇವಡಿ ಮಾಡಿದ್ದರು.
ಹೆಚ್‌ಡಿಕೆ ಫೋಟೋ ಇರುವ ಪೋಸ್ಟರ್‌ನಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆಯಲಾಗಿತ್ತು. 200 ಯೂನಿಟ್ ಉಚಿತ.. ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ ಎಂದು ವ್ಯಂಗ್ಯವಾಡಿದ್ದರು.